ಕಾರ್ಕಳ: ಭತ್ತದ ಗದ್ದೆಗೆ ನೀರು ಬಿಡಲು ಹೋದ ವ್ಯಕ್ತಿ ಸಾವು

ಕಾರ್ಕಳ: ಭತ್ತದ ಗದ್ದೆಗೆ ನೀರು ಬಿಡಲು ಹೋದ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಸಂಭವಿಸಿದೆ.
ಕಾರ್ಕಳ ನಿವಾಸಿ ರೂಪಾ (49) ಎಂಬವರ ಪತಿ ಸತೀಶ್ (53)ಮೃತಪಟ್ಟ ವ್ಯಕ್ತಿ. ಇವರು ಭತ್ತದ ಗದ್ದೆಗೆ ನೀರು ಬಿಡಲು ಹೋದಾಗ ಅರಂತೋಟು ಎಂಬಲ್ಲಿ ನೀರಿನ ತೋಡಿಗೆ ಹಾಕಿದ ಸೇತುವೆಯಿಂದ ಕಾಲು ಜಾರಿ ಕೆಳಗೆ ಬಿದ್ದು ಮೃತಪಟ್ಟಿದ್ದಾರೆ.

ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.