ಪ್ರಿಯಾಂಶ್‍ಗೆ 11ನೇ ರ್ಯಾಂಕ್ ಹಾಗೂ ಬಿಪಿನ್ ಜೈನ್ 42ನೇರ್ಯಾಂಕ್
ಉಡುಪಿ: ಕರ್ನಾಟಕ ಖಾಸಗಿ ವೈದ್ಯಕೀಯ, ಇಂಜಿನಿಯರಿಂಗ್ ಹಾಗೂ ದಂತವೈದ್ಯಕೀಯ ಕಾಲೇಜುಗಳ ಒಕ್ಕೂಟ (ಕಾಮೆಡ್–ಕೆ)ಇಂಜಿನಿಯರಿಂಗ್ ಕೋರ್ಸ್‍ಗಳ ಪ್ರವೇಶಕ್ಕಾಗಿ ರಾಷ್ಟ್ರಮಟ್ಟದಲ್ಲಿ ನಡೆಸಿದ್ದ ಸಾಮಾನ್ಯ ಪ್ರವೇಶ ಪರೀಕ್ಷೆಯ ಫಲಿತಾಂಶದಲ್ಲಿ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ 15 ವಿದ್ಯಾರ್ಥಿಗಳು 99ಕ್ಕಿಂತ ಅಧಿಕ ಪರ್ಸಂಟೇಜ್ ನೊಂದಿಗೆ ಸಾವಿರದೊಳಗಿನ ರ್ಯಾಂಕ್ ಗಳಿಸಿದ್ದಾರೆ.
ವಿದ್ಯಾರ್ಥಿಗಳಾದ ಪ್ರಿಯಾಂಶ್.ಎಸ್.ಯು 99.9913580 ಪರ್ಸಂಟೇಜ್ ನೊಂದಿಗೆ 11ನೇ ರ್ಯಾಂಕ್, ಬಿಪಿನ್ ಜೈನ್ ಬಿ.ಎಂ. 99.9625511 ಪರ್ಸಂಟೇಜ್ ನೊಂದಿಗೆ 42ನೇ ರ್ಯಾಂಕ್ ಪಡೆಯುವುದರ ಜೊತೆಗೆ, ಕ್ಷೀರಜ್.ಎಸ್.ಆಚಾರ್ಯ 99.8559659 ಪರ್ಸಂಟೇಜ್ (163ನೇ ರ್ಯಾಂಕ್), ಚಿರಂತನ.ಜೆ.ಎ. 99.8559659 ಪರ್ಸಂಟೇಜ್(164ನೇ ರ್ಯಾಂಕ್), ಅನುರಾಗ್ 99.8127557 ಪರ್ಸಂಟೇಜ್ (207ನೇ ರ್ಯಾಂಕ್), ನಿಮೇಶ್ ಆರ್ ಆಚಾರ್ಯ 99.7378579 ಪರ್ಸಂಟೇಜ್ (289 ರ್ಯಾಂಕ್), ಕೇದಾರ್ ರಮೇಶ್ ಕುಲಕರ್ಣಿ 99.7312061 ಪರ್ಸಂಟೇಜ್ (297ನೇ ರ್ಯಾಂಕ್), ಅವನಿ ಆರ್ ಶೆಟ್ಟಿ 99.731206 ಪರ್ಸಂಟೇಜ್ (299ನೇ ರ್ಯಾಂಕ್), ರಿಯಾ ಆಳ್ವಾ 99.4913148 ಪರ್ಸಂಟೇಜ್ (578ನೇ ರ್ಯಾಂಕ್), ಸಮ್ಮಿತ್ ಕೃಷ್ಣ ಯು 99.3804962 ಪರ್ಸಂಟೇಜ್ (670ನೇ ರ್ಯಾಂಕ್), ತ್ರಿಷಾ ಬಾಲಚಂದ್ರ 99.3439117 ಪರ್ಸಂಟೇಜ್ (706ನೇ ರ್ಯಾಂಕ್) ನೇಸರ್ ಸಿ.ಪಿ. 99.1732442 ಪರ್ಸಂಟೇಜ್(886ನೇ ರ್ಯಾಂಕ್), ದೇವಾಂಶ್ ದೀಪಕ್ ಬಿ. 99.1689583 ಪರ್ಸಂಟೇಜ್ (918ನೇ ರ್ಯಾಂಕ್) ಮತ್ತು ಕ್ಷಮಾ ಜಯಚಂದ್ 99.0810624 ಪರ್ಸಂಟೇಜ್ (982ನೇ ರ್ಯಾಂಕ್) ಹಾಗೂ ಪ್ರಣವ್ ಕುಮಾರ್ ಭಂಡಿ 99.0571454 ಪರ್ಸಂಟೇಜ್ (999ನೇ ರ್ಯಾಂಕ್) ಪಡೆದಿದ್ದಾರೆ. ಇವರ ಸಾಧನೆಗೆ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ.ಸುಧಾಕರ್ ಶೆಟ್ಟಿಯವರು ಅಭಿನಂದಿಸಿದ್ದಾರೆ.