ಕಾಪು ಹೊಸಮಾರಿ ಗುಡಿಗೆ ಅಶ್ವಿನಿ ಪುನೀತ್‌ ರಾಜಕುಮಾ‌ರ್ ಭೇಟಿ

ಉಡುಪಿ: ಇತ್ತೀಚೆಗಷ್ಟೆ ನವೀಕೃತಗೊಂಡು ಕಂಗೊಳಿಸುತ್ತಿರುವ ಕಾಪುವಿನ ಹೊಸ ಮಾರಿಗುಡಿ ದೇವಸ್ಥಾನಕ್ಕೆ ಇಂದು ಖ್ಯಾತ ಚಲನಚಿತ್ರ ನಟ ಪುನೀತ್ ರಾಜಕುಮಾ‌ರ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜಕುಮಾ‌ರ್ ಭೇಟಿ ನೀಡಿದರು.

ದೇವಸ್ಥಾನಕ್ಕೆ ಭೇಟಿ ನೀಡಿ ಕಾಪು ಅಮ್ಮನ ದರ್ಶನ ಪಡೆದುಕೊಂಡರು. ಬಳಿಕ ಸಂಪೂರ್ಣ ಜೀರ್ಣೋದ್ಧಾರಗೊಂಡ ದೇವಾಲಯವನ್ನು ವೀಕ್ಷಣೆ ಮಾಡಿ ಮೆಚ್ಚುಗೆ ಸೂಚಿಸಿದರು. ನವದುರ್ಗ ಲೇಖನ ಪುಸ್ತಕದ ಮಾಹಿತಿಯನ್ನು ಪಡೆದುಕೊಂಡ ಅವರು, ತಾವು ಕೂಡ ಅಮ್ಮನ ನವದುರ್ಗ ಲೇಖನ ಬರೆಯಲು ಪುಸ್ತಕವನ್ನು ಪಡೆದುಕೊಂಡರು. ಪ್ರಧಾನ ಅರ್ಚಕರು ಅಶ್ವಿನಿ ಅವರಿಗೆ ಪ್ರಸಾದ ನೀಡಿ ಗೌರವಿಸಿದರು.

ಈ ಸಂದರ್ಭ ಕಾಪು ಹೊಸ ಮಾರಿಗುಡಿ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಕೆ ವಾಸುದೇವ ಶೆಟ್ಟಿ, ವ್ಯವಸ್ಥಾಪನ ಸಮಿತಿಯ ಸದಸ್ಯರು, ಪ್ರಮುಖರು ಉಪಸ್ಥಿತರಿದ್ದರು.