ಕಾಪು: ಕಾಪು ಸಹಕಾರಿ ವ್ವವಸಾಯಿಕ ಸಂಘ ನಿ. ಇದರ ಮುಂದಿನ ಐದು ವರ್ಷಗಳ ಅವಧಿಯ ಅಧ್ಯಕ್ಷರಾಗಿ ಕಾಪು ದಿವಾಕರ್ ಶೆಟ್ಟಿ ಉಪಾಧ್ಯಕ್ಷರಾಗಿ ಸುಲಕ್ಷಣ್ ಎಲ್ .ಕುಮಾರ್ ಮಜೂರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಬುಧವಾರ ಸಂಘದ ಸಭಾಭವನದಲ್ಲಿ ನಡೆದ ಆಡಳಿತ ಮಂಡಳಿ ಸಭೆಯಲ್ಲಿ ನೂತನ ಅಧ್ಯಕ್ಷ – ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಸಲಾಯಿತು. ಚುನಾವಣಾ ನಿರ್ವಚನಾಧಿಕಾರಿ ಕೆ. ಆರ್. ರೋಹಿತ್ ಚುನಾವಣಾ ಪ್ರಕ್ರಿಯೆ ನಿರ್ವಹಿಸಿದರು.
ಆಡಳಿತ ಮಂಡಳಿ ನಿರ್ದೇಶಕರಾದ ದಿನೇಶ್ ಎ. ಸಾಲ್ಯಾನ್ ಕಾಪು, ಸದಾಶಿವ ಸೇರ್ವೆಗಾರ ಮಲ್ಲಾರು, ಅಬ್ದುಲ್ ರಜಾಕ್ ಮಜೂರು, ಸವಿತಾ ಐರಿನ್ ಕುಂದರ್ ಪಾದೂರು, ಕವಿತಾ ಮೂಳೂರು, ಸುಧಾಮ ಶೆಟ್ಟಿ ಮಲ್ಲಾರು, ಭೋಜ ಎಸ್. ಅಮೀನ್ ಉಳಿಯಾರಗೋಳಿ, ಅರುಣ್ ಕುಮಾರ್ ಶೆಟ್ಟಿ ಪೊಲಿಪು, ಅನುಪ್ ಕೆ. ಮಲ್ಲಾರು, ಅರುಣ್ ಕರಂದಾಡಿ, ದ.ಕ. ಜಿಲ್ಲಾಕೇಂದ್ರ ಸಹಕಾರಿ ಬ್ಯಾಂಕ್ ಪ್ರತಿನಿಧಿ ಬಾಲಗೋಪಾಲ್ ಬಲ್ಲಾಳ್, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಅರ್ಚನಾ ಎಂ. ಶೆಟ್ಟಿ ಉಪಸ್ಥಿತರಿದ್ದರು.
ಕರ್ನಾಟಕ ಹಾಲು ಮಹಾಮಂಡಲ ಬೆಂಗಳೂರು ಮತ್ತು ದಕ್ಷಿಣ ಕನ್ನಡ ಹಾಲು ಒಕ್ಕೂಟದ ನಿರ್ದೇಶಕರಾಗಿರುವ ಕಾಪು ದಿವಾಕರ ಶೆಟ್ಟಿ ಅವರು ಕಳೆದ ಸತತ 23 ವರ್ಷಗಳಿ೦ದ ಕಾಪು ಸಹಕಾರಿ ವ್ಯವಸಾಯಿಕ ಸಂಘದ ನಿರ್ದೆಶಕರಾಗಿ, ಕಳೆದ 10 ವರ್ಷಗಳಿಂದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದು ಇದೀಗ ಮುಂದಿನ 5 ವರ್ಷಗಳ ಅವಧಿಗೆ ಅಧ್ಯಕ್ಷರಾಗಿ ಪ್ರನರಾಯ್ಕೆಯಾಗಿದ್ದಾರೆ.
ನೂತನ ಅಧ್ಯಕ್ಷ- ಉಪಾಧ್ಯಕ್ಷರನ್ನು ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ| ಎಂ. ಎನ್. ರಾಜೇಂದ್ರ ಕುಮಾರ್, ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನ್ ಚಂದ್ರ ಸುವರ್ಣ ಮೊದಲಾದ ಗಣ್ಯರು ಅಭಿನಂದಿಸಿದ್ದಾರೆ.













