ಕಾಪು ಬೀಚ್ ನಲ್ಲಿ ಯುವಕರ ಪುಂಡಾಟ; ಗೂಡಂಗಡಿಗಳಿಗೆ ಹಾನಿ, ದುಷ್ಕೃತ್ಯ ಸಿಸಿಟಿವಿಯಲ್ಲಿ ಸೆರೆ

ಉಡುಪಿ: ಉಡುಪಿ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣವಾದ ಕಾಪು ಕಡಲ ತೀರದಲ್ಲಿ ಕಿಡಿಗೇಡಿಗಳ ಹುಚ್ಚಾಟ ಸಿ ಸಿ ಕ್ಯಾಮೆರಾದಲ್ಲಿ ದಾಖಲಾಗಿದೆ. ಬೀಚ್ ನ ಆಸುಪಾಸು ವ್ಯಾಪಾರ ನಡೆಸುವ ಸಣ್ಣಪುಟ್ಟ ಗೂಡಂಗಡಿಗಳಿಗೆ ತಂಡವಾಗಿ ಬಂದ ಕಿಡಿಗೇಡಿಗಳು ಹಾನಿ ಮಾಡಿದ್ದಾರೆ. ಐದಾರು ಮಂದಿಯ ತಂಡ ಬಂದಿದ್ದು, ತಂಡದಲ್ಲಿದ್ದ ಓರ್ವ ಯುವಕ ಎಲ್ಲಾ ಅಂಗಡಿಗಳಿಗೆ ಹೊಡೆದು ಹಾನಿ ಮಾಡಿದ್ದಾನೆ. ಈ ದುಷ್ಕೃತಕ್ಕೆ ಕಾರಣವೇನೆಂದು ತಿಳಿದು ಬಂದಿಲ್ಲ. ಯುವಕರ ತಂಡದ ಈ ಪುಂಡಾಟ ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿದೆ. ಈ ಬಗ್ಗೆ ಇನ್ನಷ್ಟೇ ತನಿಖೆ ನಡೆಸಿ ಪೊಲೀಸರು ಪ್ರಕರಣ ದಾಖಲಿಸಬೇಕಾಗಿದೆ.