ಕಾಂಗ್ರೆಸ್ ಅಭ್ಯರ್ಥಿ ಜಯ ಪ್ರಕಾಶ್ ಹೆಗ್ಡೆ ಪರ ಬೃಹತ್ ವಾಹನ ಜಾಥಾ.

ಕಾಪು: ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಯ ಪ್ರಕಾಶ್ ಹೆಗ್ಡೆ ಪರ ಮಂಗಳವಾರ ಪಡುಬಿದ್ರಿಯಿಂದ ಕಾಪು ವರೆಗೆ ಒಂದು ಸಾವಿರಕ್ಕಿಂತಲೂ ಹೆಚ್ಚು ಬೈಕ್ ಗಳ ಬೃಹತ್ ವಾಹನ ಜಾಥಾದ ಮುಖಂತರ ಕಾಪು ಪೇಟೆಯಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿದರು ವಿಯಕುಮಾರ್‌ ಸೊರಕೆ ಸಭೆಯನ್ನು ಉದ್ದೇಶಿಸಿ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ವಿರುದ್ಧ ವಾಗ್ದಾಳಿ ನಡೆಸಿದರು.

ಗಣ ರಾಜ್ಯೋತ್ಸವದ ಪೆರೇಡ್‌ನಲ್ಲಿ ನಾರಾಯಣ ಗುರುಗಳ ಟ್ಯಾಬ್ಲೋ ರದ್ದಾದಾಗ ಶ್ರೀನಿವಾಸ ಪೂಜಾರಿಯವರ ಇವರ ಜಾತಿ ಸಮೀಕರಣ ಎಲ್ಲಿಗೆ ಹೋಗಿತ್ತು? ಪಠ್ಯದಿಂದ ನಾರಾಯಣ ಗುರುಗಳ ಪಾಠ ಕಿತ್ತು ಹಾಕಿದಾಗ ಕೋಟ ಮಾತನಾಡಿಲ್ಲ. ಕೋಟ ಹೇಳಿದ ಕುಚಲಕ್ಕಿ ಕರಾವಳಿಗೆ ಬರಲೇ ಇಲ್ಲ. ಕರವಳಿಗರು ಕುಚ್ಚಲಕ್ಕಿಯನ್ನು ಕಾದಿದ್ದೇ ಬಂತು. ಕೋಟ ಶ್ರೀನಿವಾಸ ಪೂಜಾರಿ ಈಗ ಜಾತಿ ಸಮೀಕರಣದ ಮಾತನಾಡುತ್ತಾರೆ. ಆಗ ಇಲ್ಲದ ಜಾತಿ, ಈಗ ಎಲ್ಲಿಂದ ಬಂದು ಎಂದು ಸೊರಕೆ ಪ್ರಶ್ನಿಸಿದ್ದಾರೆ.

ಕಾಂಗ್ರೇಸ್ ಮುಖಂಡ ಸುಧೀರ್ ಕುಮಾರ್ ಮರೋಳಿ ಮಾತನಾಡಿ, ಪ್ರಧಾನಿ ಮೋದಿಯವರು ಕಾಂಗ್ರೆಸ್ ಸರಕಾರ ಬಂದರೆ ಹೆಣ್ಣುಮಕ್ಕಳ ಕರಿಮಣಿ ಕೀಳ್ತಾರೆ ಅಂತ ಹೇಳ್ತಾರೆ. ಪ್ರಧಾನಿಯವರಿಗೆ ಈ ಹೇಳಿಕೆ ಶೋಭೆಯಲ್ಲ ಎಂದರು. ಮುಂದುವರಿದು, ಕಾಂಗ್ರೆಸ್‌ ಸರಕಾರ ಗ್ಯಾರೆಂಟಿ ಕೊಟ್ಟರೆ ಹೆಣ್ಣು ಮಕ್ಕಳು ಹಾಳಾಗ್ತಾರಂತೆ, ಅಧಿಕಾರ ಇದ್ದಾಗ ದಾರಿತಪ್ಪಿದ್ದು ಯಾರು ಅಂತ ಎಲ್ಲರಿಗೂ ಗೊತ್ತಿಲ್ವಾ ಕುಮಾರಣ್ಣ? ಎಂದು ಮಾಜಿ ಸಿಎಂ ಕುಮಾರ ಸ್ವಾಮಿಯವರನ್ನು ಜಾಡಿಸಿದರು.

ಹೆಣ್ಣು ಮಕ್ಕಳು ಹಾದಿ ತಪ್ಪಿಲ್ಲ, ಕುಟುಂಬವನ್ನು ಕಟ್ಟಿಕೊಂಡಿದ್ದಾರೆ ಎಂದು ಹೇಳಿದ ಮರೋಳಿ, ದಕ್ಷಿಣ ಕನ್ನಡ ಜಿಲ್ಲೆಯ ಸ್ವಾಭಿಮಾನಿಗಳು ಕಟ್ಟಿದ ವಿಜಯ ಬ್ಯಾಂಕ್, ಕಾರ್ಪೊರೇಷನ್ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್ ಮುಳುಗಿಸಿದ್ದಕ್ಕೆ ಬಿಜೆಪಿ ನಾಯಕರು ಏನು ಉತ್ತರ ಕೊಡುತ್ತಾರೆ ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ನಾಯಕಿ ತೇಜಸ್ವಿನಿ ಗೌಡ ಮಾತನಾಡಿ, ಸಂವಿಧಾನವೇ ನಮಗೆ ಗೀತೆ, ಬೈಬಲ್, ಕುರಾನ್. ಯಾರೂ ಜಾತಿ ಆಧಾಋದ ಮೇಲೆ ಮತಯಾಚಿಸಬಾರದು. ಸಂಸತ್ತು ಮಾತಿನ ಮನೆ. ಮೌನದ ಮನೆ ಅಲ್ಲ. ನಮ್ಮ ಬಿಜೆಪಿ ಸಂಸದರು ಸಂಸತ್ತಿನಲ್ಲಿ ಮೌನಕ್ಕೇ ಶರಣಾಗಿದ್ದು ನಾಚಿಕೆಗೇಡು. ಜಯಪ್ರಕಾಶ್ ಹೆಗ್ಡೆಯವರು ಓರ್ವ ಅತ್ಯುತ್ತಮ ಸಂಸದೀಯ ಪಟು. ಖರ್ಗೆ ಅಧ್ಯಕ್ಷರಾಗಿರುವ ಕರ್ನಾಟಕದಿಂದ ಹೆಚ್ಚು ಸಂಸದರನ್ನು ಈ ಬಾರಿ ಕಳುಹಿಸಬೇಕು ಎಂದರು.

ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಮಾತನಾಡಿ, ಬರ ಪರಿಹಾರಕ್ಕೆ ಸುಪ್ರೀಂಕೋರ್ಟ್ ಅಸ್ತು ಹೇಳುವ ಮೂಲಕ ನ್ಯಾಯ ನೀಡಿದೆ. ಕೇಂದ್ರ ಸರಕಾರ ಬರ ಪರಿಹಾರ ನೀಡಿಲ್ಲವಾದ್ದರಿಂದ ನ್ಯಾಯ ಕೇಳಲು ಹೋಗಿ ದೆಹಲಿಯಲ್ಲಿ ಪ್ರತಿಭಟನೆ ಮಾಡಲಾಯಿತು. ನ್ಯಾಯ ಇದ್ದ ಕಾರಣ ಈ ತೀರ್ಪು ಕರ್ನಾಟಕ ಪರ ಬಂದಿದೆ ಎಂದರು.

ಉಡುಪಿ ಜಿಲ್ಲಾ ಕೇಂದ್ರ ಆಗಿರುವುದರಿಂದ ಏಳು ಈಗ ತಾಲೂಕುಗಳು ಕಾರ್ಯ ನಿರ್ವಹಿಸುತ್ತಿದವೆ. ಅದರಿಂದ ಜನರಿಗೆ ತಮ್ಮ ಸರ್ಕಾರಿ ಕೆಲಸ ಮಾಡಿಕೊಳ್ಳಲು ಸುಲಭ ಆಗಿದೆ. ಕರಾವಳಿಯ ಬಂದರುಗಳ ಅಭಿವೃದ್ಧಿಗೆ ಅಂದಿನ ಸರಕಾರಗಳಿಂದ ಸಾಕಷ್ಟು ಕೆಲಸ ಮಾಡಿಕೊಟ್ಟಿದ್ದೆ. ಜನಪ್ರತಿನಿಧಿಯಾದವನಿಗೆ ಕೆಲಸ ಮಾಡುವ ರೀತಿ ಗೊತ್ತಿರಬೇಕು. ಡೀಸೆಲ್ ಸಬ್ಸಿಡಿ, ಬೋಟ್‌ಗಳಿಗೆ ಹಾನಿ ಸಂಭವಿಸಿದರೆ ಪರಿಹಾರ ನೀಡುವ ಕಾರ್ಯಕ್ರಮ ನಾನು ಪ್ರಾರಂಭಿಸಿದೆ. ದೆಹಲಿಯಲ್ಲಿ ಕೂತುಕೊಳ್ಳಲು ಅಧಿಕಾರ ಕೊಡುವುದಲ್ಲ. ಜನರ ಜೊತೆ ಬೆರೆತು ಕೆಲಸ ಮಾಡಬೇಕು ಎಂದು ಹಿಂದಿನ ಸಂಸದರಿಗೆ ಮಾತಿನ ಚಾಟಿ ಬೀಸಿದರು.

ಚುನಾವಣೆಯಲ್ಲಿ ರಾಜಕೀಯದಲ್ಲಿ ಜಾತಿ ತರಬೇಡಿ. ಒಂದು ಜಾತಿಯ ಮತದಿಂದ ಚುನಾವಣೆ ಗೆಲ್ಲಲು ಸಾಧ್ಯವಿಲ್ಲ. ಗೆಲ್ಲುವಷ್ಟು ಮತ ಯಾವುದೇ ಒಂದು ಜಾತಿಯಲ್ಲಿ ಇಲ್ಲ. ಗೆಲ್ಲಲು ಎಲ್ಲಾ ಜಾತಿಗಳ ಮತ ಬೇಕು. ಕಾಂಗ್ರೆಸ್‌ ಎಂದಿಗೂ ಶಾಂತಿಯ ಹೂದೋಟವಾಗಿದೆ ಎಂದೂ ಜಯಪ್ರಕಾಶ್‌ ಹೆಗಡೆ ಹೇಳಿದರು.

ಈ ಸಂದರ್ಭ ಕಾಂಗ್ರೆಸ್‌ ಮುಖಂಡರುಗಳಾದ ಎಂಎ ಗಫೂರ್, ಮಾರ್ಟಿನ್‌ ಲೂಯಿಸ್‌, ಶರ್ಫುದ್ದೀನ್‌ ಶೇಖ್‌, ಹರೀಶ್‌ ಕಿಣಿ, ನವೀನ್‌ಚಂದ್ರ ಸುವರ್ಣ, ನವೀನ್‌ಚಂದ್ರ ಜೆ. ಶೆಟ್ಟಿ, ಜೀತೇಂದ್ರ ಫುರ್ಟಾಡೋ, ಗೀತಾ ವಗ್ಳೆ, ಅಮೀರ್ ಕಾಪು ದಿನೇಶ್ ಕೋಟಿಯನ್ ಶೇಖಬ್ಬ ರಮೀಝ್‌ ಹುಸೈನ್‌, ಶಾಂತಲತಾ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.