ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಹಿಂದೂ ಧಾರ್ಮಿಕ ಇಲಾಖೆ ಕರ್ನಾಟಕ ಸರ್ಕಾರ ಅಧೀನದಲ್ಲಿರುವ ದೇವಸ್ಥಾನ ವ್ಯವಸ್ಥಾಪನ ಸಮಿತಿ ಸದಸ್ಯರಾಗಿ ಉಡುಪಿ ಜಿಲ್ಲಾ ಧಾರ್ಮಿಕ ಪರಿಷತ್ತಿನ ತೃತೀಯ ಸಭೆಯಲ್ಲಿ ಮಾನ್ಯ ಜಿಲ್ಲಾಧಿಕಾರಿ ಅವರ ಅಧ್ಯಕ್ಷತೆ ಹಾಗೂ ಸಹಾಯಕ ಆಯುಕ್ತರು ಸಭೆ ನಡೆಸಿ 9 ಮಂದಿಯನ್ನು ದೇವಳದ ವ್ಯವಸ್ಥಾಪನ ಸದಸ್ಯರಾಗಿ ಆಯ್ಕೆ ಮಾಡಿದರು.
ಅರ್ಚಕ ವರ್ಗದಲ್ಲಿ ಪ್ರಧಾನ ಅರ್ಚಕ, ಪರಿಶಿಷ್ಟ ಪಂಗಡ ವರ್ಗದಲ್ಲಿ ಗಣೇಶ್ ನಾಯ್ಕ್ ಪೈಯ್ಯಾರು, ಮಹಿಳಾ ವರ್ಗದಲ್ಲಿ ಮಮತಾ ಆಚಾರ್ಯ, ಮಮತಾ ಕಿರಣ್ ಪಾದೂರು, ಹಿಂದುಳಿದ ವರ್ಗದಲ್ಲಿ ರಾಜೇಶ್ ಮೂಲ್ಯ ಕುತ್ಯಾರು, ಸಾಮಾನ್ಯ ವರ್ಗದಲ್ಲಿ ರಂಗನಾಥ್ ಭಟ್ ಕುತ್ಯಾರು, ದಿವಾಕರ್ ಬಿ ಶೆಟ್ಟಿ ಕಳತ್ತೂರು, ನಾರಾಯಣ ಶೆಟ್ಟಿ ವಳದೂರು ಪಾದೂರು, ದಿವಾಕರ ಡಿ ಶೆಟ್ಟಿ ಕಳತ್ತೂರು ಆಯ್ಕೆ ಆಗಿರುತ್ತಾರೆ.
ಧಾರ್ಮಿಕ ಸಭೆಯಲ್ಲಿ ಉಡುಪಿ ಜಿಲ್ಲಾ ಧಾರ್ಮಿಕ ಪರಿಷತ್ತು ಸದಸ್ಯರುಗಳಾದ ಶಶಿಧರ್ ಶೆಟ್ಟಿ ಎಲ್ಲೂರು, ಶ್ರೀಶ ಉಪಾಧ್ಯಾಯ, ವೆಂಕಟೇಶ್ವರ ಅಡಿಗ, ವಿನೋದ ಪಿ.ಕೆ, ಆಶಾ ಚಂದ್ರಶೇಖರ್, ಬಿ ಕೃಷ್ಣಮೂರ್ತಿ, ಪದ್ಮನಾಭ ಬಂಗೇರ, ಸದಾನಂದ ಹೇರೂರು ಉಪಸ್ಥಿತರಿದ್ದರು.
ಮಾಜಿ ಸಚಿವ ಹಾಗೂ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷರಾದ ವಿನಯ್ ಕುಮಾರ್ ಸೊರಕೆ ಅವರು ದೇವಳದ ನೂತನ 9 ಮಂದಿ ಸದಸ್ಯರನ್ನು ಶುಭಕೋರಿ ದೇವಳದ ಅಭಿವೃದ್ಧಿಗೆ ಶ್ರಮಿಸ ಬೇಕೆಂದು ಹೇಳಿ ಶುಭ ಹಾರೈಸಿದರು.












