ಉಡುಪಿ: ಕುಂದಾಪುರ ಕಲಾಕ್ಷೇತ್ರದ ಸಾರಥ್ಯದಲ್ಲಿ ಕುಂದಾಪುರ ಬೋರ್ಡ್ ಹೈಸ್ಕೂಲ್ ಆವರಣದಲ್ಲಿ ಕುಂದಾಪುರ ಹುಲಿ ಕುಣಿತ ನಡೆಯಿತು.
ಸಾವಿರಾರು ಪ್ರೇಕ್ಷಕರ ಸಮ್ಮುಖದಲ್ಲಿ ಪರಂಪರೆಯ ಕುಂದಾಪುರ ಹುಲಿ ಕುಣಿತ ಪ್ರದರ್ಶನಗೊಂಡಿತು. ರಾಜೀವ ಕೋಟ್ಯಾನ್ ಹುಲಿವೇಷದ ಗೊಂಡೆಗೆ ಪಟ್ಟಿ ಕಟ್ಟುವ ಮೂಲಕ ಚಾಲನೆ ನೀಡಿದರು. ಕಲಾಕ್ಷೇತ್ರದ ಅಧ್ಯಕ್ಷರಾದ ಬಿ.ಕಿಶೋರ್ ಕುಮಾರ್ ಕಾರ್ಯಕ್ರಮ ಆಶಯವವನ್ನು ವಿವರಿಸಿದರು. ಈ ಸಂದರ್ಭದಲ್ಲಿ ಹುಲಿವೇಷ ಕುಣಿತದ ಹಿನ್ನೆಲೆ ವಾದಕರಾದ ಡಾ.ಮಂಜನಾಥ ದೇವಾಡಿಗ, ಸುರೇಶ, ಪ್ರತಾಪ್, ರಾಜೇಶ್, ಮಂಜುನಾಥ ದೇವಾಡಿಗ, ಸುಬ್ರಹ್ಮಣ್ಯ ಹಾಗು ಹುಲಿವೇಷಧಾರಿಗಳನ್ನು ಗೌರವಿಸಲಾಯಿತು. ಬಳಿಕ ಪರಂಪರೆಯ ಹುಲಿ ಕುಣಿತದ ಜೊತೆಯಲ್ಲಿ ಬೇರೆ ಬೇರೆ ಹುಲಿ ವೇಷ ತಂಡಗಳ ಪ್ರದರ್ಶನ ನಡೆಯಿತು.