ಕರಂಬಳ್ಳಿ: ಮಲ್ಲಿಗೆ ಕೃಷಿ ಬಗ್ಗೆ ಪ್ರಾತ್ಯಕ್ಷಿಕೆ, ಸನ್ಮಾನ.

ಉಡುಪಿ: ಉಡುಪಿ ಜಿಲ್ಲಾ ಕೃಷಿಕ ಸಂಘ, ಕರಂಬಳ್ಳಿ ವಲಯ, ಕರಂಬಳ್ಳಿ ದೇವಸ್ಥಾನ ಆಡಳಿತ ಮಂಡಳಿ ಹಾಗೂ ಕರಂಬಳ್ಳಿ ವಲಯ ಬ್ರಾಹ್ಮಣ ಸಮಿತಿಯ ಜಂಟಿ ಆಶ್ರಯದಲ್ಲಿ ಮಲ್ಲಿಗೆ ಕೃಷಿ ಬಗ್ಗೆ ಪ್ರಾತ್ಯಾಕ್ಷಿಕೆ, ತೋಟಗಾರಿಕಾ ಹಣ್ಣು ಬೆಳೆಸುವ ಬಗ್ಗೆ ಮಾಹಿತಿ, ತಾರಸಿ ಕೃಷಿ ಬಗ್ಗೆ ಮಾಹಿತಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಸಂಪನ್ಮೂಲ ವ್ಯಕ್ತಿಗಳಾಗಿ ರಾಮಕೃಷ್ಣ ಶರ್ಮ, ಬಂಟಕಲ್ಲು. (ಮಲ್ಲಿಗೆ ಕೃಷಿ )
ಕುದಿ ಶ್ರೀನಿವಾಸ ಭಟ್ (ಹಣ್ಣ್ಣಿನ ಬೆಳೆ ) ಹಾಗು ಕುಮಾರಸ್ವಾಮಿ ಉಡುಪ (ತಾರಸಿ ಕೃಷಿ) ಅವರು ವೈಜ್ಞಾನಿಕ ಪದ್ದತಿಯಲ್ಲಿ ಕೃಷಿ ಲಾಭದಾಯಕ ಹೇಗೆ ಎಂಬ ಬಗ್ಗೆ ಸಮಗ್ರ ಮಾಹಿತಿ ನೀಡಿದರು.

ಇದೇ ಸಂದರ್ಭದಲ್ಲಿ ನುರಿತ ಹಿರಿಯ ಅನುಭವಿ ಕೃಷಿಕ ಶ್ರೀ ವಿಠ್ಠಲದಾಸ ಉಪಾಧ್ಯ ಪಾಡಿಗಾರ್ ಇವರನ್ನು ಸನ್ಮಾನಿಸಲಾಯಿತು.

ಅರ್ಚಕ ದಿವಾಕರ ಐತಾಳ್ ದೀಪ ಬೆಳಗಿಸಿ, ಕೃಷಿಕ ಸಂಘದ ಅಧ್ಯಕ್ಷ ಶ್ರೀಪತಿ ಭಟ್ ಕರಂಬಳ್ಳಿ ಸ್ವಾಗತಿಸಿದರು.
ಶ್ರೀನಿವಾಸ ಬಲ್ಲಾಳ್ ಸಭೆಯ ಅಧ್ಯಕ್ಷತೆ ವಹಿಸಿದ್ದರು .
ಕರಂಬಳ್ಳಿ ಬ್ರಾಹ್ಮಣ ಸಮಿತಿಯ ಅಧ್ಯಕ್ಷ ಕೀಳಂಜೆ ಶ್ರೀಕೃಷ್ಣರಾಜ್ ಭಟ್, ಪೆರಂಪಲ್ಲಿ ಕೃಷಿಕ ಸಂಘದ ಅಧ್ಯಕ್ಷ ರವೀಂದ್ರ ಪೂಜಾರಿ , ಹರಿಕೃಷ್ಣ ಶಿವತ್ತಾಯ ಪೆರಂಪಳ್ಳಿ ಮುಖ್ಯ ಅತಿಥಿ ಗಳಾಗಿ ಆಗಮಿಸಿದ್ದರು.
ರವೀಂದ್ರ ಗುಜ್ಜರಬೆಟ್ಟು ಕಾರ್ಯಕ್ರಮ ನಿರ್ವಹಿಸಿ ನಾಗರಾಜ್ ಭಟ್ ವಂದಿಸಿದರು.
ರಂಗನಾಥ ಸಾಮಗ ಸಹಕರಿಸಿದರು .