ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಕ್ರಿಕೆಟ್ ಆಟಗಾರ ಮಯಂಕ್ ಅಗರವಾಲ್ ಭೇಟಿ

ಮಂಗಳೂರು: ಭಾರತ ಕ್ರಿಕೆಟ್ ತಂಡದ ಆರಂಭಿಕ ಬ್ಯಾಟರ್ ಮಯಂಕ್ ಅಗರವಾಲ್ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಸೋಮವಾರ ಭೇಟಿ ನೀಡಿದರು.

ಮಯಂಕ್ ಅಗರವಾಲ್ ಅವರು ಪತ್ನಿ ಅಶಿತಾ ಸೂದ್ ಜೊತೆ ಕಟೀಲು ದೇವಸ್ಥಾನಕ್ಕೆ ಅಕ್ಕಿ, ಬೆಲ್ಲ, ಅರಶಿನ ಒಳಗೊಂಡ ಮಡಿಲಕ್ಕಿಯನ್ನು ದೇವಿಗೆ ಸಮರ್ಪಿಸಿದರು.

ಅನುವಂಶಿಕ ಅರ್ಚಕರಾದ ಕುಮಾರ್ ಅಸ್ರಣ್ಣ ಅವರು ವಸ್ತ್ರ ಮತ್ತು ಪ್ರಸಾದ ನೀಡಿ ಮಯಂಕ್‌ಗೆ ಗೌರವ ಸಲ್ಲಿಸಿದರು. ಅನುವಂಶಿಕ ಮೊಕ್ತೇಸರ ವಾಸುದೇವ ಅಸ್ರಣ್ಣ, ಟ್ರಸ್ಟಿ ವೆಂಕಟರಮಣ ಅಸ್ರಣ್ಣ ಇದ್ದರು. ಬಳಿಕ ಉಡುಪಿ ಜಿಲ್ಲೆ ಕುಂದಾಪುರದ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಮತ್ತು ಮಾರಣಕಟ್ಟೆಯಲ್ಲಿರುವ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದರು.