ಕಟಪಾಡಿ:ನಾವು ಸರಿದಾರಿಯಲ್ಲಿ ಸಾಗಿದಾಗ ದೇಶ ವಿಶ್ವ ಗುರುವಾಗುತ್ತದೆ

ಕಟಪಾಡಿ: ಕಟಪಾಡಿಯಯ ಎಸ್.ವಿ.ಎಸ್ ವಿದ್ಯಾವರ್ಧಕ ಸಂಘ ಹಾಗೂ ತ್ರಿಶಾ ಸಂಸ್ಥೆಯ ವತಿಯಿಂದ 76ನೇ ಗಣರಾಜ್ಯೋತ್ಸವನ್ನು ಕಟಪಾಡಿಯ ಎಸ್.ವಿ.ಎಸ್ ಶಾಲಾ ಮೈದಾನದಲ್ಲಿ ಧ್ವಜಾರೋಹಣ ಮಾಡುವುದರ ಮುಖಾಂತರ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಪೂರ್ಣಪ್ರಜ್ಞ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ. ಶಿವಕುಮಾರ್ ಅವರು ದ್ವಜಾರೋಹಣ ನೆರ ವೇರಿಸಿ, ನಮ್ಮ ದೇಶ ಒಗ್ಗೂಡುವುದ್ದಕ್ಕೆ‌ ಕಾರಣೀಕರ್ತರಾದ ನಮ್ಮೆಲ್ಲಾ ಹಿರಿಯರನ್ನು ಸದಾ ಸ್ಮರಿಸುತ್ತಾ, ನಾವು ಸರಿದಾರಿಯಲ್ಲಿ ಸಾಗಿದಾಗ ದೇಶ ವಿಶ್ವಗುರುವಾಗುತ್ತದೆ ಎಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ ತ್ರಿಶಾ ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಸಿಎ ಗೋಪಾಲಕೃಷ್ಣ ಭಟ್, ಸಿದ್ಧಾಂತ್ ಫೌಂಡೇಶನ್ ಟ್ರಸ್ಟಿ ರಾಮಪ್ರಭು ಮತ್ತು ಎಸ್.ವಿ.ಎಸ್. ವಿದ್ಯಾವರ್ಧಕ ಸಂಘದ ಸಂಚಾಲಕರಾದ ಸತ್ಯೇಂದ್ರ ಪೈ ಹಾಗೂ ಸಂಘದ ಸದಸ್ಯರು, ಎಸ್.ವಿ.ಎಸ್. ಕನ್ನಡ ಮಾಧ್ಯಮ ಶಾಲೆ ಮತ್ತು ಇಂಗ್ಲಿಷ್ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಶ್ರೀಧರ್ ಎನ್.ಎಸ್. ಮತ್ತು ಶ್ರೀ ದೇವೇಂದ್ರ ನಾಯಕ್ , ತ್ರಿಶಾ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಪ್ರಾಧ್ಯಾಪಕಿ ನಿಧಿ ಎನ್. ಪೈ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.