ಏ.30: ಇಂದಿರಾ ಎಜುಕೇಶನ್ ಟ್ರಸ್ಟ್ ನ ಪದವಿ ಪ್ರದಾನ ಮತ್ತು ಡಿಪ್ಲೊಮಾ ಪದವಿ ಪ್ರದಾನ ಸಮಾರಂಭ

ಮಂಗಳೂರು: ಇಂದಿರಾ ಎಜುಕೇಶನ್ ಟ್ರಸ್ಟ್ ತನ್ನ ಪದವಿ ಪಡೆದ ವಿದ್ಯಾರ್ಥಿಗಳ ಪದವಿ ಪ್ರದಾನ ಮತ್ತು ಡಿಪ್ಲೋಮಾ ಪದವಿ ಪ್ರದಾನ ಸಮಾರಂಭವನ್ನು ಏಪ್ರಿಲ್ 30 ರಂದು ನಡೆಸಲಿದೆ.

ಸಮಾರಂಭವು ಮಂಗಳೂರಿನ ಹಂಪನಕಟ್ಟೆಯ ಮಿಲಾಗ್ರಿಸ್ ಸಭಾಂಗಣದಲ್ಲಿ ಬೆಳಗ್ಗೆ 10 ಗಂಟೆಗೆ ನಡೆಯಲಿದೆ.

ಡಾ. ಜೆಸಿಂತಾ ಡಿಸೋಜಾ, ಡಿಎಂ, ಡಿಎ, ಡಿಎನ್‌ಎಂ, ಜಿಲ್ಲಾ ವೈದ್ಯಾಧಿಕಾರಿ ಹಾಗೂ ಜಿಲ್ಲಾ ಶಸ್ತ್ರ ಚಿಕಿತ್ಸಕಿ, ಮುಖ್ಯ ಅತಿಥಿಯಾಗಿ, ಶ್ರೀಮತಿ ಉಷಾ ಮುಕುಂದ್ ಭಂಡಾರಿ, ಸಹಾಯಕ ನರ್ಸಿಂಗ್ ನಿರ್ದೇಶಕಿ, ವೈದ್ಯಕೀಯ ಶಿಕ್ಷಣ, ಬೆಂಗಳೂರು ಮತ್ತು ಡಾ. ವೈಶಾಲಿ, ಅಧ್ಯಕ್ಷರು, ಬೋರ್ಡ್ ಆಫ್ ಸ್ಟಡೀಸ್, ಶೈಕ್ಷಣಿಕ ಪರಿಷತ್ತಿನ ಸದಸ್ಯರು, RGUHS, ಬೆಂಗಳೂರು, ಗೌರವ ಅತಿಥಿಗಳಾಗಿ, ಪ್ರೊ. ಯು .ಟಿ. ಇಫ್ತಿಕಾರ್ ಫರೀದ್, ಆರ್‌ಜಿಯುಎಚ್‌ಎಸ್‌ನ ಸಿಂಡಿಕೇಟ್ ಸದಸ್ಯ ವಿಶೇಷ ಆಹ್ವಾನಿತರಾಗಿರುವರು.

ಡಾ. ಸೈಯದ್ ನಿಜಾಮುದ್ದೀನ್, ಇಂದಿರಾ ಎಜುಕೇಶನ್ ಟ್ರಸ್ಟ್ ಮತ್ತು ಇಂದಿರಾ ಆಸ್ಪತ್ರೆಯ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕರು ಅಧ್ಯಕ್ಷತೆಯನ್ನು ವಹಿಸಲಿರುವರು.