ಏಪ್ರಿಲ್ 1 ರಿಂದ ಹೆದ್ದಾರಿ ಟೋಲ್ ದರದಲ್ಲಿ ರಿಯಾಯಿತಿ: ನಿತಿನ್ ಗಡ್ಕರಿ

ನವದೆಹಲಿ: ಕೇಂದ್ರ ಸರ್ಕಾರ ಏಪ್ರಿಲ್ 1 ರೊಳಗೆ ಹೊಸ ಟೋಲ್ ಸುಂಕ ಬಿಡುಗಡೆಗೊಳಿಸಲಿದ್ದು, ಇದರಿಂದ ವಾಹನ ಸವಾರರಿಗೆ ರಿಯಾಯಿತಿ ಸಿಗಲಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದರು.

ರಾಷ್ಟ್ರೀಯ ಹೆದ್ದಾರಿಗಳಲ್ಲಿನ ಸುಂಕ ಕೇಂದ್ರದಲ್ಲಿ ಪ್ರಯಾಣಿಕರಿಗೆ ಸುಲಭವಾಗುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಏ.1ರ ಒಳಗೆ ಹೊಸ ಟೋಲ್ ಸುಂಕ ನೀತಿಯನ್ನು ಬಿಡುಗಡೆಗೊಳಿಸಲಿದೆ. ಹೊಸ ನೀತಿಯಲ್ಲಿ ಪ್ರಯಾಣಿಕರಿಗೆ ಸ್ವಲ್ಪ ಪ್ರಮಾಣದ ರಿಯಾಯಿತಿ ದೊರೆಯಲಿದೆ. ಜೊತೆಗೆ ಸುಂಕ ವಸೂಲಿಯನ್ನೂ ಸರಳೀಕರಿಸಲಾಗಿದ್ದು, ಇದರಿಂದ ಜನರಿಗೆ ಹೆಚ್ಚು ಅನುಕೂಲವಾಗಲಿದೆ ಎಂದರು.

2023-24ರಲ್ಲಿ 64,809.86 ಕೋಟಿ ರೂ. ಟೋಲ್ ಸಂಗ್ರಹವಾಗಿದ್ದು, ಶೇ.35ರಷ್ಟು ವೃದ್ಧಿಯಾಗಿದೆ ಎಂದು ತಿಳಿಸಿದರು.