ಎ.6 ರಿಂದ ಎ.18: ಶ್ರೀ ರಾಮ ಭಜನಾ ಮಂಡಳಿ ಕೊಂಡಾಡಿಯಲ್ಲಿ ಸುವರ್ಣ ಮಹೋತ್ಸವ ಸಂಭ್ರಮ

ಹಿರಿಯಡಕ: ಶ್ರೀ ರಾಮ ಭಜನಾ ಮಂಡಳಿ ಕೊಂಡಾಡಿ ಭಜನೆಕಟ್ಟೆಯಲ್ಲಿ ಸುವರ್ಣ ಮಹೋತ್ಸವ ಸಂಭ್ರಮ ಪ್ರಯುಕ್ತ ಎ.6 ರಿಂದ ಎ.18ರ ವರೆಗೆ ಶ್ರೀರಾಮ ತಾರಕ ಮಂತ್ರ ಯಜ್ಞ 50 ಗಂಟೆಗಳ ಅಖಂಡ ಭಜನೆ, ಅನ್ನಾರಾಧನೆ ಕಾರ್ಯಕ್ರಮ ನಡೆಯಲಿದೆ.

ಧಾರ್ಮಿಕ ಕಾರ್ಯಕ್ರಮಗಳು:
06-04-2024 ಶನಿವಾರದಿಂದ
ರಾತ್ರಿ ಘಂಟೆ 7.30ರಿಂದ: ನಿತ್ಯ ಭಜನೆ ಹಾಗೂ ಅನ್ನಾರಾಧನೆ.

14-04-2024 ಆದಿತ್ಯವಾರ
ಸಂಜೆ ಘಂಟೆ 4.00ಕ್ಕೆ ಹಿರಿಯಡ್ಕ ಮಹತೋಭಾರ ಶ್ರೀ ವೀರಭದ್ರ ದೇವಸ್ಥಾನದಿಂದ ಶ್ರೀ ರಾಮ ದೇವರ ಸನ್ನಿಧಿ ಕೊಂಡಾಡಿ ಭಜನೆಕಟ್ಟೆಗೆ ಹಸಿರು ಹೊರೆಕಾಣಿಕೆ ಮೆರವಣಿಗೆ ನಡೆಯಲಿದೆ.

15-04-2024 ಸೋಮವಾರ
ಪ್ರಾತಃ ಘಂಟೆ 8.00ರಿಂದ ಶ್ರೀ ರಾಮ ತಾರಕ ಮಂತ್ರ ಯಜ್ಞ ಆರಂಭ ಮಧ್ಯಾಹ್ನ ಘಂಟೆ 11.00ಕ್ಕೆ ಯಾಗದ ಪೂರ್ಣಾಹುತಿ
ಮಧ್ಯಾಹ್ನ ಘಂಟೆ 11.30ರಿಂದ ಧಾರ್ಮಿಕ ಸಭೆ ಮಧ್ಯಾಹ್ನ ಘಂಟೆ 1 ಕ್ಕೆ ಅನ್ನಸಂತರ್ಪಣೆ.

16-04-2024 ಮಂಗಳವಾರ
ಪ್ರಾತಃ ಘಂಟೆ 6.00ರಿಂದ 50 ಘಂಟೆಗಳ ಅಖಂಡ ಭಜನೆ ಆರಂಭ ಮಧ್ಯಾಹ್ನ ಘಂಟೆ 12.30ಕ್ಕೆ ಮಹಾಪೂಜೆ ಮಧ್ಯಾಹ್ನ ಘಂಟೆ 1 ಕ್ಕೆ ಅನ್ನಸಂತರ್ಪಣೆ.

17-04-2024 ಬುಧವಾರ
ಶ್ರೀ ರಾಮ ನವಮಿಯ ಭಜನೆಯು ಮುಂದುವರಿಯುವುದು.

ಮಧ್ಯಾಹ್ನ ಘಂಟೆ 12.30ಕ್ಕೆ ಮಹಾಪೂಜೆ, ಮಧ್ಯಾಹ್ನ ಘಂಟೆ 1 ರಿಂದ ಮಹಾ ಅನ್ನಸಂತರ್ಪಣೆ.

18-04-2024 ಗುರುವಾರ
ಪ್ರಾತಃ ಘಂಟೆ 8.00ಕ್ಕೆ ಭಜನಾ ಮಂಗಲೋತ್ಸವ, ಪ್ರಸಾದ ವಿತರಣೆ, ಸಂಜೆ ಘಂಟೆ 7.00ಕ್ಕೆ ಮರುಭಜನೆ.

ಎ.6 ಶನಿವಾರ ರಾತ್ರಿ ಗಂಟೆ 7:30 ರಿಂದ “ನಿತ್ಯ ಭಜನೆ” ಪ್ರಾರಂಭವಾಗುವುದು.

“ಬನ್ನಿ, ಕೊಂಡಾಡಿ ಭಜನೆಕಟ್ಟೆಗೆ ಶ್ರೀ ರಾಮನನ್ನು ಕೊಂಡಾಡಿ ಭಜಸಲು”