ಉಪ್ಪುಂದ: ಜಿಲ್ಲೆಯ ಬೈಂದೂರು ಸಮೀಪ ಬೊಲೇರೊ ವಾಹನ ರಸ್ತೆಯ ಡಿವೈಡರ್‌ಗೆ ಢಿಕ್ಕಿ ಹೊಡೆದ ಪರಿಣಾಮ ಓರ್ವ ಸಾವಿಗೀಡಾಗಿದ್ದು, ಇತರ ಐವರು ಗಾಯಗೊಂಡಿದ್ದು ಓರ್ವ ಸಾವನ್ನಪ್ಪಿದ ಘಟನೆ ಕಿರಿಮಂಜೇಶ್ವರ ರಾ.ಹೆದ್ದಾರಿಯಲ್ಲಿ ನಡೆದಿದೆ .
ರಾಮಣ್ಣ ಮೃತಪಟ್ಟ ವ್ಯಕ್ತಿ. ಬಾಗಲಕೋಟೆ ಜಿಲ್ಲೆಯ ಹನಮಂತ ಹಾಗೂ ಮನೆಯವರು ಉಡುಪಿಯಿಂದ ಬೊಲೇರೋ ವಾಹನದಲ್ಲಿ ಅವರ ಮಾವನ ಮಗನ ಮದುವೆಯ ಹಿನ್ನೆಲೆಯಲ್ಲಿ ಬಾದಾಮಿಗೆ ಹೋಗಿ ಬೆಳಗ್ಗಿನ ಜಾವ 4.30ರ ವೇಳೆ ಕಿರಿಮಂಜೇಶ್ವರ ತಲುಪಿದಾಗ ಅಪಘಾತ ನಡೆದಿದೆ.
ಡಿವೈಡರ್‌ಗೆ ಢಿಕ್ಕಿಯಾಗಿ ವಾಹನ 50 ಅಡಿ ದೂರ ಸಾಗಿ ವಿದ್ಯುತ್ ಕಂಬಕ್ಕೆ ಢಿಕ್ಕಿಯಾಗಿ ನಿಂತಿತು. ರಾಮಣ್ಣ ಅವರ ತಲೆಗೆ ಗಂಭೀರ ಗಾಯವಾಗಿದ್ದು, ಕೂಡಲೇ ಕುಂದಾಪುರ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ವೈದ್ಯರು ಪರೀಕ್ಷಿಸಿ ಮೃತರಾಗಿರು ವುದಾಗಿ ತಿಳಿಸಿದರು. ಚಾಲಕ ನಿರಂಜನ, ಶಿವಕ್ಕ, ರೇಷ್ಮಾ, ಕಾವ್ಯ, ಪ್ರಜ್ವಲ್ ಗಾಯಗೊಂಡವರು. ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.