ಉಡುಪಿ ಜಿಲ್ಲಾ ರೈತ ಸಂಘದ ನೇತೃತ್ವದಲ್ಲಿ ನಡೆಯುತ್ತಿರುವ ಬ್ರಹ್ಮಾವರ ಸಕ್ಕರೆ ಕಾರ್ಖಾನೆಯ ಬಹುಕೋಟಿ ವಂಚನೆಯ ಮತ್ತು ಅದರ ತನಿಖೆಯ ವಿಳಂಬ ನೀತಿಯ ವಿರುದ್ಧ ನಡೆಯುತ್ತಿರುವ ಅನ್ನದಾತರ ಅಹೋರಾತ್ರಿ ಸತ್ಯಗ್ರಹ ಧರಣಿಯು ಇಂದು 2ನೇ ದಿನಕ್ಕೆ ಕಾಲಿರಿಸಿದ್ದು ಇಂದಿನ ಧರಣಿಯ ಉಡುಪಿ ಜಿಲ್ಲಾ ಕಿಸಾನ್ ಕಾಂಗ್ರೆಸ್ ಪದಾಧಿಕಾರಿಗಳು ಹಾಗೂ ಕಾಪು ವಲಯದ ರೈತ ಮುಖಂಡರು ಭಾಗವಹಿಸಿದರು.
ಸರ್ಕಾರವು ಕೂಡಲೇ ಈ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಂಡಲ್ಲಿ ತನಿಖೆಯನ್ನು ಮುಂದುವರಿಸಲು ಅವಕಾಶ ಮಾಡಿ ಕೊಡಬೇಕೆಂದು ಸರ್ಕಾರವನ್ನು ಒತ್ತಾಯಿಸಿದೆವು. ಜಿಲ್ಲಾ ರೈತ ಸಂಘವು ಹಮ್ಮಿಕೊಂಡ ಈ ಅನಿರ್ದಿಷ್ಟಾವಧಿ ಧರಣಿಗೆ ತಮ್ಮ ಸಂಪೂರ್ಣ ಬೆಂಬಲವಿದೆ ಎಂದು ಅವರು ಘೋಷಿಸಿದರು.
ಕಾರ್ಯ ಕ್ರಮದಲ್ಲಿ ಜಿಲ್ಲಾ ಮಾಜಿ ಸಭಾಪತಿಗಳಾದ ಕೆ. ಪ್ರತಾಪ್ ಚಂದ್ರ ಶೆಟ್ಟಿಯವರು ಹಾಗೂ ಜಿಲ್ಲಾ ಕಿಸಾನ್ ಕಾಂಗ್ರೆಸ್ ಅಧ್ಯಕ್ಷರಾದ ಎಲ್ಲೂರು ಶಶಿಧರ್ ಶೆಟ್ಟಿ, ಉಪಾಧ್ಯಕ್ಷರಾದ ಶೇಖರ್ ಕೋಟ್ಯಾನ್ ಉದ್ಯಾವರ, ಕಾರ್ಯದರ್ಶಿ ಉದಯ ಹೆರೂರು. ಜಿಲ್ಲಾ ಕಾನೂನು ಘಟಕದ ಅಧ್ಯಕ್ಷರಾದ ಹರೀಶ್ ಶೆಟ್ಟಿ ಪಾಂಗಾಳ, ಜಿಲ್ಲಾ ಕಾಂಗ್ರೆಸ್ ಸದಸ್ಯರಾದ ಕೀರ್ತಿ ಶೆಟ್ಟಿ ಅಂಬಲಪಾಡಿ, ನರಸಿಂಹ ಪೂಜಾರಿ ಬೈಂದೂರು, ರಾಜೇಶ್ ದೇವಾಡಿಗ ಬೈಂದೂರು, ನಾಗಪ್ಪ ಕೊಠಾರಿ ವoಡ್ಸೆ , ರವಿ ಗಾಣಿಗ ವಂಡ್ಸೆ, ಗ್ರಾಮ ಅಧ್ಯಕ್ಷರುಗಳಾದ ಐರಿನ್ ತಾವ್ರೋ (108) ಕಳತ್ತೂರು, ಗ್ಯಾಬ್ರಿಯಾಲ್ ಮಾಥಾಯಸ್ ಮುದರoಗಡಿ, ವಿನ್ಸೆoಟ್ ಡಿಸೋಜ ಎರ್ಮಾಳು, ಸೋಮಯ್ಯ ಕಾಂಚನ್, ಕೀರ್ತನ್ ಕುವೆಲೈ ಪಲಿಮಾರು, ಮೆಕ್ಕಿ ಡಿಸೋಜ ಪಲಿಮಾರು ಹಾಗೂ ಕಿಸಾನ್ ಕಾಂಗ್ರೆಸ್ ಸರ್ವ ಸದಸ್ಯರು ಈ ಧರಣಿಯಲ್ಲಿ ಭಾಗವಹಿಸಿದ್ದರು.












