ಉಡುಪಿ: 3 ತಿಂಗಳಿನಿಂದ ಉಡುಪಿಯ ಹೆಚ್ಡಿಬಿ ಫೈನಾನ್ಸ್ ನಲ್ಲಿ ಕೆಲಸ ಮಾಡಿಕೊಂಡಿದ್ದ ನಾಗಪ್ಪ (31) ಎಂಬವವರು 7-8 ದಿನಗಳಿಂದ ತನ್ನ ತಮ್ಮ ಗಣೇಶ್ ರವರ ಮನೆಯಾದ ಬನ್ನಂಜೆ ಉಡುಪಿ ಎಂಬಲ್ಲಿಂದ ಕೆಲಸಕ್ಕೆ ತೆರಳುತ್ತಿದ್ದರು.
ಸೆ.1 ರಂದು ಬೆಳಿಗ್ಗೆ 06:30 ಗಂಟೆಗೆ ಕಳೆದು ಹೋದ ಮೊಬೈಲ್ನ್ನು ತೆಗೆದುಕೊಂಡು ಬರಲು ಬನ್ನಂಜೆಯ ಮನೆಯಿಂದ ಮಂಗಳೂರಿಗೆ ಹೋದವರು ವಾಪಾಸ್ ಮನೆಗೂ ಹೋಗದೇ, ಸಂಬಂಧಿಕರ ಮನೆಗೂ ಹೋಗದೇ ಕಾಣೆಯಾಗಿರುತ್ತಾರೆ.
ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿರುತ್ತದೆ.