ಉಡುಪಿ: ಭದ್ರತಾ ಸಿಬ್ಬಂದಿಯೋರ್ವ ಮ್ಯಾನೆಜರ್ಗೆ ಚೂರಿಯಿಂದ ಇರಿದು ಪರಾರಿಯಾದ ಘಟನೆ ಉಡುಪಿಯ ಸಿಟಿ ಬಸ್ ನಿಲ್ದಾಣದ ಬಳಿಯ ಹರ್ಷ ಶೋರೂಮ್ ನಲ್ಲಿ ನಡೆದಿದೆ.
ಸಂತೆಕಟ್ಟೆಯ ರೋನ್ಸನ್ ಎವರೆಸ್ಟ್ ಡಿ’ಸೋಜಾ(36) ಚೂರಿ ಇರಿತಕ್ಕೊಳಗಾದ ವ್ಯಕ್ತಿ. ಇವರು ಹರ್ಷ ಶೋರೂಂ ನಲ್ಲಿ ಕ್ಲಸ್ಟರ್ ಮ್ಯಾನೇಜರ್ ಆಗಿ ಕೆಲಸ ಮಾಡಿಕೊಂಡಿದ್ದಾರೆ.
ಕೆಲಸದ ವಿಚಾರಕ್ಕೆ ಸಂಬಂಧಿಸಿ ಆರೋಪಿ ಸೆಕ್ಯೂರಿಟಿ ಗಾರ್ಡ್ ಪ್ರಸಾದ್ ಹಾಗೂ ಮ್ಯಾನೇಜರ್ ರೋನ್ಸನ್ ಮಧ್ಯೆ ಜಗಳ ಉಂಟಾಗಿದೆ. ಆರೋಪಿ ಪ್ರಸಾದ್, ರೋನ್ಸನ್ ಅವರ ಕುತ್ತಿಗೆಗೆ ಇರಿದು ಅಲ್ಲಿಂದ ಪರಾರಿಯಾಗಿದ್ದಾನೆ.
ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.