ಉಡುಪಿ, ಆಗಸ್ಟ್ 25: ನಗರದ ಮಿಷನ್ ಕಾಂಪೌಂಡ್ ಬಳಿ ಇರುವ ಸಿಟಿ ಗೇಟ್‌ವೇ ಅಪಾರ್ಟ್‌ಮೆಂಟ್ಸ್ ಕಟ್ಟಡ ಸಂಕೀರ್ಣದ ಸಂಘದ ವಾರ್ಷಿಕ ಮಹಾಸಭೆಯು ಆಗಸ್ಟ್ 25ರ ಭಾನುವಾರ ಕಟ್ಟಡದ ಆವರಣದಲ್ಲಿಯೇ ಇರುವ ಸಭಾಗೃಹದಲ್ಲಿ ನೆರವೇರಿತು.
ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರೇ ಆಗಿರುವ ಶ್ರೀ ಇಕ್ಬಾಲ್ ಹಮ್ಮಾಜಿಯವರು ವಹಿಸಿದ್ದರು ಹಾಗೂ ಸದಸ್ಯರನ್ನು ಸ್ವಾಗತಿಸಿ ಸಭೆಯನ್ನು ಪ್ರಾರಂಭಿಸಿದರು. ಸಂಘದ ಕಾರ್ಯದರ್ಶಿಯವರಾದ ಶ್ರೀಮತಿ ಪ್ರಮಿಳಾ ಜತ್ತನ್ನರವರು ಹಿಂದಿನ ಮಹಾಸಭೆಯ ವರದಿಯನ್ನು ಸಭೆಯಲ್ಲಿ ಮಂಡಿಸಿದರು.
ಆ ಬಳಿಕ ಸಂಘದ ಖಜಾಂಚಿಯಾಗಿರುವ ಶ್ರೀಮತಿ ರೇಶ್ಮಾರವರು ಹಿಂದಿನ ವರ್ಷದ ಆಯವ್ಯಯಗಳ ವರದಿಯನ್ನು ವಿವರಿಸಿ ಇಂದಿನ ದಿನದವರೆಗಿನ ಖರ್ಚುವೆಚ್ಚಗಳ ಲೆಕ್ಕಾಚಾರದ ವಿವರಣೆಯನ್ನು ನೀಡಲಾಯಿತು.
ಇದೇ ಸಭೆಯಲ್ಲಿ ಮುಂದಿನ ಆರ್ಥಿಕ ವರ್ಷ, ಅಂದರೆ 2024-2025ನೇ ಸಾಲಿನ ನೂತನ ಸಮಿತಿಯನ್ನೂ ರಚಿಸಲಾಯಿತು. ಅಧ್ಯಕ್ಷರಾಗಿ ಶ್ರೀ ಇಕ್ಬಾಲ್ ಹಮ್ಮಾಜಿ, ಕಾರ್ಯದರ್ಶಿಯಾಗಿ ಶ್ರೀಮತಿ ಪ್ರಮಿಳಾ ಜತ್ತನ್ನ ಹಾಗೂ ಖಜಾಂಚಿಯಾಗಿ ಶ್ರೀಮತಿ ರೇಶ್ಮಾರವರು ಮುಂದಿನ ಸಮಿತಿಯಲ್ಲಿ ಮುಂದುವರೆಯಲಿದ್ದಾರೆ.
ಸಮಿತಿಯ ಸದಸ್ಯರ ವಿವರಗಳು ಈ ಕೆಳಗಿನಂತಿವೆ:
ಅಧ್ಯಕ್ಷರು: ಶ್ರೀ ಇಕ್ಬಾಲ್ ಹಮ್ಮಾಜಿ
ಕಾರ್ಯದರ್ಶಿ: ಶ್ರೀಮತಿ ಪ್ರಮಿಳಾ ಜತ್ತನ್ನ
ಖಜಾಂಜಿ: ಶ್ರೀಮತಿ ರೇಶ್ಮಾ
ಸದಸ್ಯರು:
1.ಶಾಲಿನಿ ಅಮ್ಮಣ್ಣ
- ಸುರೇಶ್ ಮುತ್ತಪ್ಪನ್
- ಸಂಚಿತಾ ನಾಯಕ್
- ಅಶ್ರಫ್ ಪುತ್ತಿಗೆ
- ವಿಜಯ್ ಜತ್ತನ್ನ
- ವಿಜಯ್ ನಾಯಕ್
ಕಡೆಯದಾಗಿ ಶ್ರೀ ಅಶ್ರಫ್ ಪುತ್ತಿಗೆಯವರು ಧನ್ಯವಾದಗಳನ್ನು ಅರ್ಪಿಸುವ ಮೂಲಕ ಸಭೆ ಮುಕ್ತಾಯಗೊಂಡಿತು.












