ಉಡುಪಿ : ಉಡುಪಿ ಸಿಂಡಿಕೇಟ್ ಕ್ರೆಡಿಟ್ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ಲಿ. ಉಡುಪಿ ಇದರ ಮಹಾಸಭೆಯು ಸಹಕಾರಿಯ ನೋಂದಾಯಿತ ಕಚೇರಿಯಲ್ಲಿ ಅಧ್ಯಕ್ಷರಾದ ಜೆಸಿಂತಾ ಡಿ ಸೋಜ ಇವರ ಅಧ್ಯಕ್ಷತೆಯಲ್ಲಿ ಜರುಗಿತು.
ಸಹಕಾರಿಯ ಅಧ್ಯಕ್ಷರಾದ ಜೆಸಿಂತಾ ಡಿಸೋಜ ಮಾತನಾಡಿ, ನಮ್ಮ ಸಹಕಾರಿಯು ಅಭಿವೃದ್ಧಿ ಹೊಂದುತ್ತಿದ್ದು ತಮ್ಮೆಲ್ಲರ ಸಹಕಾರದಿಂದ ಈ ಮಟ್ಟಕ್ಕೆ ಬೆಳೆದಿದೆ ಎನ್ನಲು ನಮಗೆ ಸಂತೋಷವಾಗುತ್ತದೆ. ಮುಂದಿನ ಆರ್ಥಿಕ ವರ್ಷದಲ್ಲಿ ಹೊಸ ಯೋಜನೆಗಳಿಗೆ ಸದಸ್ಯರ ಸಹಕಾರವಿರಲಿ ಎಂದರು.
ಮಿಲಾಗ್ರಿಸ್ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಡಾ. ನೇರಿ ಕರ್ನೆಲಿಯೋ, ಸಾಮಾಜಿಕ ಕಾರ್ಯಕರ್ತ ಸ್ಟೀವನ್ ಕುಲಾಸೊ ಶುಭ ಹಾರೈಸಿದರು.
ದೇವರ ಸ್ತುತಿಯೊಂದಿಗೆ ಪ್ರಾರ್ಥನೆಯನ್ನು ಶಾಖಾ ಸಿಬ್ಬಂದಿಗಳು ನೆರವೇರಿಸಿದರೆ, ಉಪಾಧ್ಯಕ್ಷರಾದ ಅಜಯ್ ಕುಮಾರ್ ಸ್ವಾಗತಿಸಿದರು. ಲೆಕ್ಕ ಪರಿಶೋಧನಾ ವರದಿ ವಾಚನೆ ಮತ್ತು ನಿರೂಪಣೆಯನ್ನು ಮುಖ್ಯಕಾರ್ಯನಿರ್ವಾಹಕರಾದ ಜೀವನ್ ಡಿಸೋಜ ಇವರು ನೆರವೇರಿಸಿದರು. ಧನ್ಯವಾದವನ್ನು ನಿರ್ದೇಶಕರಾದ ಪ್ರಶಾಂತ್ ಕುಮಾರ್ ಇವರು ಸಲ್ಲಿಸಿದರು.
ಈ ಸಂದರ್ಭದಲ್ಲಿ ನಿರ್ದೇಶಕರುಗಳಾದ ಪ್ರಶಾಂತ್ ಕುಮಾರ್, ಜೂದ್ ನೆಲ್ಸನ್ ಡಿ ಸೋಜಾ, ಗುರುಚರಣ್ ನಾಯ್ಕ್, ರೋಹನ್ ಪ್ರಶಾಂತ್ ಕುಲಾಸೊ, ಪ್ರಶಾಂತಿ ಪ್ರಿಯಾ ಕ್ಯಾಸ್ತಲಿನೋ, ಸೀಮಾ, ಅಜಿತ್, ಸಿಬ್ಬಂದಿ ವರ್ಗದವರು ಹಾಗೂ ಸಹಕಾರಿಯ ಸದಸ್ಯರು ಉಪಸ್ಥಿತರಿದ್ದರು.