ಉಡುಪಿ: ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಉಡುಪಿ ತಾಲೂಕು ಘಟಕದ ವತಿಯಿಂದ ಪತ್ರಿಕಾ ದಿನಾಚರಣೆಯ ಅಂಗವಾಗಿ ಖ್ಯಾತ ಪತ್ರಕರ್ತ ಎಂಐಸಿ ಮಣಿಪಾಲದ ಪ್ರಾಧ್ಯಾಪಕರಾಗಿರುವ ಸತ್ಯಬೋಧ ಜೋಶಿ ಅವರನ್ನು ಪತ್ರಿಕಾ ದಿನಾಚರಣೆಯ ಅಂಗವಾಗಿ ಅಭಿನಂದಿಸಿ ಗೌರವಿಸಲಾಯಿತು.
ಕೀಲಿಮಣೆ ತಜ್ಞ, ವಿದ್ವಾಂಸ ನಾಡೋಜ ಕೆಪಿ ರಾವ್ ರವರು ಶಾಲು ಹೊದೆಸಿ, ಸ್ಮರಣಿಕೆಯೊಂದಿಗೆ ಅಭಿನಂದನಾ ಪತ್ರ ನೀಡಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಕಸಾಪ ಉಡುಪಿ ತಾಲೂಕು ಘಟಕದ ಅಧ್ಯಕ್ಷ ರವಿರಾಜ್ ಎಚ್.ಪಿ, ಗೌರವ ಕಾಯ೯ದಶಿ೯ಗಳಾದ ಜನಾರ್ದನ್ ಕೊಡವೂರು, ರಂಜನಿ ವಸಂತ್, ಸಾಮಾಜಿಕ ಜಾಲ ನಿರ್ವಾಹಕರಾದ ಶಶಿಕಾಂತ ಶೆಟ್ಟಿ, ಸದಸ್ಯ ವಸಂತ್, ರಾಘವೇಂದ್ರ ಪ್ರಭು ಕವಾ೯ಲು, ಎಂಐಸಿ ಮಣಿಪಾಲದ ಪ್ರಾಧ್ಯಾಪಕಿ ಹೆಚ್ .ಎಸ್. ಶುಭ, ಸಹಾಯಕ ಪ್ರಾಧ್ಯಾಪಕ ವಿನ್ಯಾಸ್ ಹೆಗ್ಡೆ ಉಪಸ್ಥಿತರಿದ್ದರು.