ಉಡುಪಿ ಶ್ರೀಕೃಷ್ಣ ಮಠದಲ್ಲಿ ಅ.31ರಂದು ದೀಪಾವಳಿ ಆಚರಣೆ

ಉಡುಪಿ : ಉಡುಪಿ ಶ್ರೀಕೃಷ್ಣ ಮಠದಲ್ಲಿ ಅ.31ರಂದು ದೀಪಾವಳಿ ಆಚರಣೆ ನಡೆಯಲಿದೆ.

ನ.1ರ ಶುಕ್ರವಾರ ಅಮಾವಾಸ್ಯೆ ಸಂಜೆ ಸುಮಾರು 6 ಗಂಟೆವರಗೆ ಮಾತ್ರ ಇರುವುದರಿಂದ ಅ. 31ರಂದು ದೀಪಾವಳಿ ಆಚರಣೆ ಮಾಡಲಾಗುವುದು ಎಂದು ಮಠದ ಪ್ರಕಟಣೆ ತಿಳಿಸಿದೆ.

ಅ. 29ರಂದು ಯಮದೀಪ, ಅ. 30ರ ಬುಧವಾರ ನೀರು ತುಂಬಿಸುವುದು (ಹಿರಿಯರ ಹಬ್ಬ) ಹಾಗೂ ಅ. 31ರ ಗುರುವಾರ “ನರಕ ಚತುರ್ದಶಿ” ಚಂದ್ರೋದಯ ಕಾಲ ಬೆಳಿಗ್ಗೆ 5-15ಕ್ಕೆ ಎಣ್ಣಿ ಹಚ್ಚಿ ಸ್ನಾನ ಮಾಡುವ ಆಚರಣೆ ಜರುಗಲಿದ್ದು, ಅಂದು ಸಂಜೆ ದೀಪಾವಳಿ, ಬಲೀಂದ್ರ ಪೂಜೆ, ಗದ್ದೆಗಳಿಗೆ ದೀಪ ಇಡುವುದು, ಲಕ್ಷ್ಮಿ ಪೂಜೆ‌ ನೆರವೇರಲಿದೆ. ನ.2ರಂದು ಬಲಿಪಾಡ್ಯ, ಗೋ ಪೂಜೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.