ಉಡುಪಿ ಶ್ರೀಕೃಷ್ಣಮಠ ರಾಜಾಂಗಣದಲ್ಲಿ ಪುಟ್ಟ ಕಲಾವಿದೆಯ ಕಲಾಸಿರಿಯ ಅನಾವರಣ.

ಉಡುಪಿ: ಖ್ಯಾತ ಪುಟ್ಟ ಪುಟಾಣಿ ಕಲಾವಿದೆ ಹತ್ತು ವರ್ಷದ ಕುಮಾರಿ ಗಂಗಾ ಶಶಿಧರ್ ಇವಳಿಂದ ವಯಲಿನ್ ವಾದನ ಕಛೇರಿ ಕಾರ್ಯಕ್ರಮ ನಿನ್ನೆ ಶ್ರೀಕೃಷ್ಣಮಠದ ರಾಜಾಂಗಣದಲ್ಲಿ ಕಿಕ್ಕಿರಿದ ಜನ ಸಂದಣಿಯ ನಡುವೆ ನಡೆಯಿತು .

ಅಪಾರ ಜನಪ್ರಿಯತೆಯನ್ನು ಪಡೆದುಕೊಂಡಿರುವ ಈ ಬಾಲಕಲಾವಿದೆಯನ್ನು ಪೂಜ್ಯ ಪರ್ಯಾಯ ಹಿರಿಯ ಮತ್ತು ಕಿರಿಯ ಶ್ರೀಪಾದರು ಶ್ರೀಕೃಷ್ಣ ಪ್ರಸಾದವನ್ನು ನೀಡಿ ಹರಸಿದರು.

ಗುರುಗಳಾದ ವಿದ್ವಾನ್ ಶ್ರೀ ಅನುರೂಪ್ ಅವರನ್ನೂ ಮತ್ತಿತರ ಸಹಕಲಾವಿದರನ್ನೂ ಪ್ರಸಾದ ನೀಡಿ ಹರಸಿದರು.

ಕಿಕ್ಕಿರಿದ ರಾಜಾಂಗಣದಲ್ಲಿ ನಡೆದ ಈ ಸಂಗೀತ ಗಾನ ಸುಧೆಯನ್ನು ಉಡುಪಿಯ ಹೆಸರಾಂತ ಗಾಂಧಿ ಆಸ್ಪತ್ರೆಯ ನಿರ್ದೇಶಕರಾದ ಡಾ.ಹರಿಶ್ಚಂದ್ರರವರು ತಮ್ಮ ಆಸ್ಪತ್ರೆಯ 30ನೇ ವರ್ಧಂತ್ಯುತ್ಸವದ ನಿಮಿತ್ತ ಈ ಭವ್ಯ ಕಾರ್ಯಕ್ರಮವನ್ನು ಪ್ರಾಯೋಜಿಸಿದ್ದರು.

ಶ್ರೀ ಮಠದ ವಿಶೇಷ ಭಕ್ತರಾದ ಹರಿಶ್ಚಂದ್ರ ದಂಪತಿಗಳನ್ನು ಪೂಜ್ಯ ಪರ್ಯಾಯಶ್ರೀಪಾದರು ಶ್ರೀಕೃಷ್ಣಪ್ರಸಾದವನ್ನು ನೀಡಿ ಹರಸಿದರು.

ಕುಮಾರಿ ಗಂಗಾಳಿಗೆ ಭಗವದ್ಗೀತೆಯನ್ನು ಬರೆಯುವ ಕೋಟಿ ಗೀತಾ ಲೇಖನ ಯಜ್ಞದೀಕ್ಷೆಯನ್ನು ಪೂಜ್ಯ ಶ್ರೀಪಾದರು ನೀಡಿ ಉಜ್ವಲ ಭವಿಷ್ಯವನ್ನು ಹಾರೈಸಿದರು.