ಉಡುಪಿ: ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದವರಿಗೆ ಮಂಗಳೂರಿನ ಮೋತಿ ಮಹಲ್ ಹೋಟೆಲ್ ನಲ್ಲಿ ಪ್ರತಿಷ್ಟಿತ ಪಬ್ಲಿಕ್ ರಿಲೇಷನ್ಸ್ ಕೌನ್ಸಿಲ್ ಆಫ್ ಇಂಡಿಯಾ (PRCI) ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಿತು.
ಉಡುಪಿಯ ಫ್ಯಾಷನ್ ತಾರೆ ವಿದ್ಯಾ ಸರಸ್ವತಿಯವರು ಚಾಣಕ್ಯ ಅವಾರ್ಡ್ಸ್ ವಿಭಾಗದ 2024 ನ “ಫ್ಯಾಷನ್ ಕ್ಯಾಟಲಿಸ್ಟ್ ಆಫ್ ದ ಇಯರ್” ಎಂಬ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿದ್ದಾರೆ. ಈ ಪ್ರಶಸ್ತಿಯನ್ನು ” ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ “ಸಚಿವರಾದ ಶ್ರೀ ಶ್ರೀಪಾದ್ ನಾಯಕ್ ರವರ ಮೂಲಕ ನೀಡಲಾಯಿತು.
ವಿದ್ಯಾ ಸರಸ್ವತಿಯವರು ಮಿಸೆಸ್ ಇಂಡಿಯಾ ಕರ್ಣಾಟಕದ “ವಾರಿಯರ್ ಕ್ವೀನ್” “ಟ್ರೆಡಿಷನಲ್ ವಿನ್ನರ್” ಆಗಿದ್ದಾರೆ. “2022ರ ಕ್ಯೂಟೆಸ್ಟ್ ಮೊಮ್” ಕಿರೀಟವನ್ನೂ ಪಡೆದಿದ್ದಾರೆ. ಜ್ಯುವೆಲ್ಲರಿ ಹಾಗೂ ಉಡುಪಿ ಕೈಮಗ್ಗ ಸೀರೆಯ ಮೊದಲ ರೂಪದರ್ಶಿಯೂ ಆಗಿದ್ದರು.
2023 ಹಾಗೂ 2024 ರಲ್ಲಿ ಉಡುಪಿ ಕೈಮಗ್ಗ ಸೀರೆಯನ್ನುಟ್ಟು ಸ್ವತಃ ರೂಪದರ್ಶಿಯಾಗಿ 2000 ಕ್ಯಾಲೆಂಡರ್ ನ್ನು ರಾಜ್ಯ ಅಂತರಾಜ್ಯಗಳಲ್ಲಿ ಹೋಗಿ ಜನರಿಗೆ ಹಂಚಿ, ನೇಕಾರರಿಗೆ ಉತ್ತಮ ಪ್ರೋತ್ಸಾಹವನ್ನು ಕೊಟ್ಟಿದ್ದರು. ಅಲ್ಲದೆ ಸತತವಾಗಿ 4 ವರ್ಷಗಳಿಂದ ಫ್ಯಾಷನ್ ಲೋಕದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದ್ದಾರೆ. ಇವರು ಉಡುಪಿ ತುಳುಕೂಟದ ಮಾಜಿ ಉಪಾಧ್ಯಕ್ಷರು, 2024 ರ ಆಟಿ ಕೂಟದ ಸಂಚಾಲಕಿಯಾಗಿ ದುಡಿದಿದ್ದಾರೆ.