ಉಡುಪಿ: ವಕೀಲರ ಸಂಘಕ್ಕೆ ಪುತ್ತಿಗೆ ಶ್ರೀ ಭೇಟಿ

ಉಡುಪಿ: ಚತುರ್ಥ ಬಾರಿಗೆ ಪರ್ಯಾಯ ಸ್ವೀಕರಿಸಲಿರುವ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಶುಕ್ರವಾರ ಉಡುಪಿಯ ವಕೀಲರ ಸಂಘಕ್ಕೆ ಭೇಟಿ ನೀಡಿ ಸಂಘದ ವತಿಯಿಂದ ಗೌರವ ಸ್ವೀಕರಿಸಿದರು.

ಪರ್ಯಾಯ ಮಹೋತ್ಸವಕ್ಕೆ ಶ್ರೀಪಾದರು ಆಮಂತ್ರಿಸಿದರು. ವಕೀಲರ ಸಂಘದ ಮಾಜಿ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಸೇರಿದಂತೆ ಹಿರಿ- ಕಿರಿಯ ವಕೀಲರು ಇದ್ದರು.