ಉಡುಪಿ: ಲೋಕೋಪಯೋಗಿ ಇಲಾಖೆಯ ಸಂಜಯ ಅವರಿಗೆ ಬೀಳ್ಕೊಡುಗೆ ಸಮಾರಂಭ

ಉಡುಪಿ: ಲೋಕೋಪಯೋಗಿ ಇಲಾಖೆ, ಉಪ ವಿಭಾಗ ಉಡುಪಿ ಸುಮಾರು 31 ವರ್ಷಗಳ ಕಾಲ ದಸ್ತುಮೇಜು ಬರಹಗರಾಗಿ ಸೇವೆ ಸಲ್ಲಿಸಿದ ವಯೋ ನಿವೃತ್ತಿ ಹೊದ್ದಿದ್ದ ಸಂಜಯರವರ ಬೀಳ್ಕೊಡುಗೆ ಸಮಾರಂಭ ಬನ್ನಂಜೆ ಇಲಾಖೆಯ ಕಚೇರಿಯಲ್ಲಿ ಶುಕ್ರವಾರ ಜರಗಿತು.
ಮುಖ್ಯ ಅತಿಥಿಯಾದ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ದಿನೇಶ್, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ವಿನಾಯಕ ಪೂಜಾರಿ ಜೊತೆಗೂಡಿ ಸಂಜಯ ರವರಿಗೆ ಶಾಲು ಹೊದಿಸಿ, ಫಲ ಪುಷ್ಪ, ಸ್ಮರಣಿಕೆ ಜೊತೆಗೆ ಬಂಗಾರದ ಉಂಗುರ ತೊಡಿಸಿ ಗೌರವಿಸಿದರು.
ನಗರಸಭಾ ಸದಸ್ಯರಾದ ಶ್ರೀಶ ಭಟ್, ಇಂಜಿನಿಯರ ಉದಯ ಕುಮಾರ್ ಶೆಟ್ಟಿ, ಇಲಾಖೆಯ ಲೆಕ್ಕಾಧಿಕಾರಿ ಮಂಜುನಾಥ್, ರವೀಂದ್ರ ನಾಯಕ್, ಇಲಾಖೆಯ ಅಧಿಕಾರಿಗಳು, ಗುತ್ತಿಗೆದಾರರು, ಸಿಬ್ಬಂಧಿ ವರ್ಗದವರು ಉಪಸ್ಥರಿದ್ದರು.