ಉಡುಪಿ: ಲಯನ್ಸ್ ಕ್ಲಬ್ ಪರ್ಕಳ ವತಿಯಿಂದ ಸಹಾಯಧನ ವಿತರಣೆ.

ಉಡುಪಿ: ಲಯನ್ಸ್ ಕ್ಲಬ್ ಪರ್ಕಳ ವತಿಯಿಂದ ಡಿ.3ರಂದು ಅತ್ರಾಡಿ ಮದಗ ಇಲ್ಲಿ ಕಳೆದ ಜುಲೈ ತಿಂಗಳಲ್ಲಿ ಬೀಕರ ಮಳೆಗೆ ಪೂರ್ಣ ಕುಸಿದಗೊಂಡ ಮನೆಯನ್ನು ಪುನರ್ನಿರ್ಮಾಣ ಮಾಡಲು ಲಯನ್ಸ್ ಕ್ಲಬ್ ಇಂಟರ್ನ್ಯಾಷನಲ್’ನ ಒಂದು ಪ್ರಮುಖ ಕಾರ್ಯಕ್ರಮವಾದ “ಹೋಮ್ ಫಾರ್ ಹೋಂ ಲೆಸ್ ” ಕಾರ್ಯಕ್ರಮದಡಿಯಲ್ಲಿ ಸಹಾಯದನವನ್ನು ವಿತರಿಸಿದರು.

ಈ ಸಂದರ್ಭದಲ್ಲಿ ಲಯನ್ಸ್ ಜಿಲ್ಲೆ 317c ಯ ಪ್ರಥಮ ಜಿಲ್ಲಾ ಉಪಗವರ್ನರ್ ಪಿಎಂಜೆಎಪ್ ಲಯನ್ ಸ್ವಪ್ನ ಸುರೇಶ್, ಪರ್ಕಳ ಕ್ಲಬ್ ನ ಮಾಜಿ ಅಧ್ಯಕ್ಷರಾದ ಎಂಜೆಎಪ್ ಲಯನ್ ರಾಧಾಕೃಷ್ಣ ಮೆಂಡನ್, ಹಿರಿಯಡ್ಕ ಕ್ಲಬ್ ನ ಸದಸ್ಯರಾದ ಲಯನ್ ಬಾಲಕೃಷ್ಣ ಹೆಗ್ಡೆ, ಊರ ಪ್ರಮುಖರಾದ ಸತ್ಯಾನಂದ ನಾಯಕ್, ಮನೆ ಯಜಮಾನ ಕೃಷ್ಣ ಶೆಟ್ಟಿಗಾರ್, ಶ್ರೀಮತಿ ಮೇಘ ಶೆಟ್ಟಿಗಾರ್ ಹಾಜರಿದ್ದರು.