ಉಡುಪಿ:ಹ್ಯೂಮನ್ ರೈಟ್ಸ್ ಫೆಡರೇಶನ್ ಆಫ್ ಇಂಡಿಯಾ ಉಡುಪಿ ವಿಭಾಗಕ್ಕೆ ಉದಯ ನಾಯ್ಕ್ ಅಧ್ಯಕ್ಷರಾಗಿ ಆಯ್ಕೆ.

ಹ್ಯೂಮನ್ ರೈಟ್ಸ್ ಫೆಡರೇಶನ್ ಆಫ್ ಇಂಡಿಯಾ ಉಡುಪಿ ವಿಭಾಗಕ್ಕೆ ( ಉಡುಪಿ ಜಿಲ್ಲೆಗೆ) ಅಧ್ಯಕ್ಷರಾಗಿ ಆಯ್ಕೆ. ಕೇಂದ್ರೀಯ ಮಂಡಳಿ ಕಾರ್ಯಕಾರಿಣಿ ಸಭೆಯಲ್ಲಿ ಸ್ಥಾಪಕರು ಬಾಲಕೃಷ್ಣ ರೈ ಕೆ / ಜನರಲ್ ಸೆಕ್ರೆಟರಿ ಡಾ. ಕೇಶವ್ಎಸ್ /CEO ಶಿವರಾಜು ಬಿ ಐಯಾರ್ , ಇವರ ಉಪಸ್ಥಿತಿಯಲ್ಲಿ ಮಂಗಳೂರಿನ ಕೆನರಾ ಕ್ಲಬ್ ಹಾಲ್ ನಲ್ಲಿ ಎಕ್ಸಿಕ್ಯೂಟಿವ್ ಮೀಟ್ ನಲ್ಲಿ ಆಯ್ಕೆ ಮಾಡಿರುತ್ತಾರೆ.

ಜೆಸಿಐ ಇಂಡಿಯಾದ ವಲಯ ತರಬೇತುದರಾಗಿ, ಎಚ್. ಆರ್. ಎಫ್. ಐ ನಲ್ಲಿ ನಿರ್ದೇಶಕ, ಕಾರ್ಯನಿರ್ವಾಹಕ ನಿರ್ದೇಶಕ ಹಾಗೂ ಕಳೆದ ವರ್ಷ, ಉಪಾಧ್ಯಕ್ಷರಾಗಿ 13 ವರ್ಷಗಳ ಅನುಭವದಿಂದ ಹಲವಾರು ಮಾನವ ಹಕ್ಕುಗಳ ಕ್ಷೇತ್ರದಲ್ಲಿ, ಸಾಮಾಜಿಕ ಕಾರ್ಯಕ್ರಮಗಳು , ಶಾಲಾ- ಕಾಲೇಜು ಹಾಗೂ ಹಲವಾರು ಸಂಸ್ಥೆಗಳಲ್ಲಿ ಸಾಮಾಜಿಕ ಅರಿವು ಮೂಡಿಸುವ ತರಬೇತಿಗಳು, ಸ್ವಚ್ಛತಾ ಅಭಿಯಾನ, ರಕ್ತದಾನಿಯು, ರಕ್ತದಾನ ದ ಅರಿವು ಗಮನಿಸಿ ಈ ಹುದ್ದೆಯನ್ನು ನೀಡಿರುತ್ತಾರೆ. ಇವರು ಸೌತ್ ಕೆನರಾ ಫೋಟೋಗ್ರಾಫರ್ ಅಸೋಸಿಯೇಷನ್ ನ ಉಡುಪಿ ವಲಯದ ಛಾಯಾಗ್ರಾಹಕರು.

ಇವರಿಗೆ 2014ರಲ್ಲಿ ಮಾನವ ಹಕ್ಕುಗಳ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆ ಯನ್ನು ಗುರುತಿಸಿ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಗೌರವಾನ್ವಿತ ಸದಸ್ಯರಾದ ನ್ಯಾಯಾಧೀಶರು ಶ್ರೀ ಸಿ. ಜೆ ಹುನಗುಂದ ಹಾಗೂ ವಿಲೇಖಾನಾಧಿಕಾರಿ ಯವರು “ಹ್ಯೂಮನ್ ರೈಟ್ಸ್ ಅವಾರ್ಡ್” ನೀಡಿ ಗೌರವಿಸಿದ್ದು ಜಿಲ್ಲೆಗೆ ಹೆಮ್ಮೆ ತಂದಿದೆ.

ಉಡುಪಿಯ ಹಿಂದಿನ ಹೆಚ್ ಆರ್ ಎಫ್ ಐ ಅಧ್ಯಕ್ಷರು ಅಡ್ವಕೇಟ್ ಪ್ರೀತಿ ವೈ, ಮತ್ತು ನಿರ್ದೇಶಕರು, ಬೇರೆ ಬೇರೆ ಜಿಲ್ಲೆಗಳಿಂದ ಬಂದಿರುವ ನಿರ್ದೇಶಕರು ಉಪಸ್ಥಿತರಿದ್ದರು.