ಉಡುಪಿ: ಉಡುಪಿಯ ಯುವ ಪಾಕತಜ್ಞ ನಾಗರಾಜ ಭಟ್ (48) ಅವರು ಅಲ್ಪಕಾಲದ ಅಸೌಖ್ಯದಿಂದ ರವಿವಾರ ಸಂಜೆ ನಿಧನರಾಗಿದ್ದಾರೆ. ಅವರು ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.
ಪುಟ್ಟಣ್ಣ ಎಂದು ಆತ್ಮೀಯರಿಂದ ಕರೆಸಿಕೊಳ್ಳುತಿದ್ದ ನಾಗರಾಜ ಭಟ್, ಶುಚಿ ರುಚಿಯಾದ ಉಡುಪಿ ಅಡುಗೆ ತಯಾರಿಯಲ್ಲಿ ಅತ್ಯಂತ ಸಮರ್ಥರೆಂದು ಗುರುತಿಸಲ್ಪಟ್ಟಿದ್ದರು. ಉಡುಪಿ ಅಡುಗೆಯವರ ಸಂಘ, ಜಿಲ್ಲಾ ಯುವ ಬ್ರಾಹ್ಮಣ ಪರಿಷತ್, ಕರಂಬಳ್ಳಿ ವಲಯ ಬ್ರಾಹ್ಮಣ ಸಮಿತಿಗಳು ನಾಗರಾಜ ಅವರ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿವೆ.












