ಉಡುಪಿ, ಜು.3: ಉಡುಪಿ ಧರ್ಮಪ್ರಾಂತ್ಯದ ಹಿರಿಯ ಧರ್ಮಗುರುಗಳಲ್ಲಿ ಒಬ್ಬರಾಗಿದ್ದ ಕಲ್ಯಾಣಪುರ ಮಿಲಾಗ್ರಿಸ್ ಕಾಥೆದ್ರಲ್’ನ ರೆಕ್ಟರ್ ವo. ಫಾ. ವಲೇರಿಯನ್ ಮೆಂಡೊನ್ಸ (75) ನಿಧನ ಹೃದಯಾಘಾತದಿಂದ ಇಂದು ಸಂಜೆ ನಿಧನ ಹೊಂದಿದ್ದಾರೆ.
75ರ ವಯಸ್ಸಿನ ಇವರು ಅತ್ಯಂತ ಉತ್ಸಾಹಿ ಧರ್ಮ ಗುರುಗಳಾಗಿದ್ದರು. ಸದಾ ಹಸನ್ಮುಖಿಯಾಗಿದ್ದ ಇವರು ಕೇವಲ ಕ್ರೈಸ್ತರ ಮಾತ್ರವಲ್ಲದೆ ಎಲ್ಲಾ ಸಮುದಾಯದ ಜನರ ಪ್ರೀತಿಗೆ ಪಾತ್ರರಾಗಿದ್ದರು.
ಉಡುಪಿಯ ಶಿರ್ವದಲ್ಲಿ ಜನಿಸಿದ ಇವರು ಉಡುಪಿ, ಮಂಗಳೂರಿನ ವಿವಿಧ ದೇವಾಲಯಗಳಲ್ಲಿ ಧರ್ಮ ಗುರುಗಳಾಗಿ ನಿಸ್ವಾರ್ಥ ಸೇವೆ ಸಲ್ಲಿಸಿದ್ದರು. ಸಂಗೀತ ಪ್ರೇಮಿ ಆಗಿದ್ದ ಇವರ ಹಲವು ಧ್ವನಿ ಸುರುಳಿಗಳು ಬಿಡುಗಡೆಯಾಗಿದ್ದವು.