ಉಡುಪಿ: ಭಾರತ್ ಮಾರ್ಕೆಟಿಂಗ್ ಮತ್ತು ಹ್ಯಾವೆಲ್ಸ್ ಇಂಡಿಯಾ ಕಂಪನಿಯ ವತಿಯಿಂದ ಎಲೆಕ್ಟ್ರಿಷಿಯನ್’ಗಳಿಗೆ ಕಾರ್ಯಾಗಾರ.

ಉಡುಪಿ: ಎಲೆಕ್ಟ್ರಾನಿಕ್ ಸೆಕ್ಟರ್ ಸ್ಕಿಲ್ ಕೌನ್ಸಿಲ್ ಆಫ್ ಇಂಡಿಯಾ, ಹ್ಯಾವೆಲ್ಸ್ ಇಂಡಿಯಾ ಜಂಟಿಯಾಗಿ ಭಾರತ್ ಮಾರ್ಕೆಟಿಂಗ್ ಸಹಭಾಗಿತ್ವದಲ್ಲಿ ಜುಲೈ 21ರಂದು ಮಹಾರಥ ಕಿದಿಯೂರು ಹೋಟೆಲ್ ನ ‘ಅನಂತ ಶಯನ’ ಹಾಲ್ ನಲ್ಲಿ ಎಲೆಕ್ಟ್ರಿಷಿಯನ್ ಗಳಿಗೆ ಕಾರ್ಯಾಗಾರ ನಡೆಯಿತು.

ಇದು ಕೇಂದ್ರ ಸರ್ಕಾರದ ಉತ್ತಮ ಯೋಜನೆಯಾಗಿದ್ದು, ಕೌಶಲ್ಯದಿಂದ ಯಶಸ್ಸಿನವರೆಗೆ ಎಲೆಕ್ಟ್ರಿಷಿಯನ್ ಗಳನ್ನು ಕೊಂಡೊಯ್ಯಲು ಸಹಕಾರಿಯಾಗಿದೆ. ಈ ಕಾರ್ಯಾಗಾರದಲ್ಲಿ 320ಕ್ಕೂ ಮಿಕ್ಕಿ ಉಡುಪಿ ಜಿಲ್ಲೆಯ ಎಲೆಕ್ಟ್ರಿಷಿಯನ್ ಗಳು ಭಾಗಿಯಾಗಿದ್ದರು.

ಕೇಂದ್ರ ಸರ್ಕಾರದ ಸಂಪನ್ಮೂಲ ವ್ಯಕ್ತಿಯಾಗಿ ಹೈದರಾಬಾದ್ ನ ಶ್ಯಾಮ್ ಪ್ರಸಾದ್ ಖಾಸರಿಯವರು ಎಲೆಕ್ಟ್ರಿಷಿಯನ್ ಗಳಿಗೆ ತರಬೇತಿ ಮತ್ತು ಮಾಹಿತಿಯನ್ನು ನೀಡಿದರು.

ಹ್ಯಾವಲ್ಸ್ ಕಂಪನಿಯ ಜನರಲ್ ಡೆಪ್ಯೂಟಿ ಮ್ಯಾನೆಜರ್ ವಿವೇಕನಂದ ಭಟ್, ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಎನ್.ಬಿ ಕುಲಕರ್ಣಿ, ಸಂದೀಪ್ ಹೆಗ್ಡೆ, ವಿಶಾಲ್ ನಾಯ್ಕ, ನಿತಿನ್ ಪೂಜಾರಿ, ಸಂದೇಶ್ ಶೆಟ್ಟಿ, ಆಕಿಬ್, ರಾಜೇಶ್ ಎಂ.ಪಿ, ರೂಪೇಶ್, ವಿನಯ್, ರವಣ್, ರುದ್ರಯ್ಯ ಹಿರೇಮಠ್ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಹ್ಯಾವೆಲ್ಸ್ ಕಂಪನಿಯ ಎಲ್ಲಾ ಉತ್ಪನ್ನಗಳ ಮತ್ತು ಹೊಸ ಉತ್ಪನ್ನಗಳ ಮಾಹಿತಿಯನ್ನು ನೀಡಲಾಯಿತು.

ಉಡುಪಿ ಭಾರತ್ ಮಾರ್ಕೆಟಿಂಗ್ ನ ಮಾಲೀಕರಾದ ಸುಬ್ರಮಣ್ಯ ಹೆಗ್ಡೆ ಮತ್ತು ಶ್ರೀಮತಿ ನಯನ ಸುಬ್ರಮಣ್ಯ ಹೆಗ್ಡೆಯವರು ಹಾಗೂ ಸಿಬ್ಬಂದಿ ವರ್ಗದವರು‌ ಉಪಸ್ಥಿತರಿದ್ದರು ಹಾಗೂ ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ನೆರವೇರಿಸಿದರು.

ಯೋಜನೆಯ ವಿಶೇಷತೆ:

ಕಾರ್ಯಾಗಾರದಲ್ಲಿ ಭಾಗವಹಿಸಿದ ಎಲೆಕ್ಟ್ರಿಷಿಯನ್ ಮಿತ್ರರಿಗೆ ಕೇಂದ್ರ ಸರ್ಕಾರದಿಂದ ಪ್ರಮಾಣಿಕೃತ ಪ್ರಮಾಣ ಪತ್ರ ನೀಡಲಾಯಿತು. ಮತ್ತು ಹೊಸ ಉತ್ಪನ್ನ ಮತ್ತು ತಾಂತ್ರಿಕ ತಿಳುವಳಿಕೆ, ಸುರಕ್ಷತೆ, ಸಂಬಂಧಿತ ಸಲಹೆ ಮತ್ತು ಹ್ಯಾವೆಲ್ಸ್ ಕಂಪನಿವತಿಯಿಂದ ಭಾಗವಹಿಸಿದ ಎಲ್ಲಾ ಎಲೆಕ್ಟ್ರಿಷಿಯನ್ ರವರಿಗೆ ವಿಮೆ ಸೌಲಭ್ಯವನ್ನು ನೀಡಿದರು.