ಉಡುಪಿ: ಫೆ.7ರಿಂದ 9ರ ವರೆಗೆ ‘ಪವರ್ ಪರ್ಬ’; ಪೂರ್ವಭಾವಿಯಾಗಿ ಕಾರು, ಬೈಕ್ ರ್ಯಾಲಿ.

ಮಣಿಪಾಲ: ಮಹಿಳಾ ಉದ್ಯಮಿಗಳ ಪವರ್ ಸಂಸ್ಥೆ (ಫ್ಲ್ಯಾಟ್ ಫಾರಂ ಆಫ್ ವ್ಯೂಮೆನ್ ಎಂಟರ್ ಪ್ರೆನ್ಯೂರ್ಸ್) ಆಶ್ರಯದಲ್ಲಿ ಫೆ.7ರಿಂದ 9ರ ವರೆಗೆ ಮಿಷನ್ ಕಂಪೌಂಡ್ ಬಳಿಯ ಕ್ರಿಶ್ಚಿಯನ್ ಹೈಸ್ಕೂಲ್ ಮೈದಾನದಲ್ಲಿ ನಡೆಯಲಿರುವ ‘ಪವರ್ ಪರ್ಬ-2025’ರ ಪೂರ್ವಭಾವಿಯಾಗಿ ಬುಧವಾರ ಕಾರು ಮತ್ತು ಬೈಕ್ ರ್ಯಾಲಿ ನಡೆಯಿತು.

ಜಿಲ್ಲಾಧಿಕಾರಿ ಕಚೇರಿ ಎದುರಿನಿಂದ ಹೊರಟ ರ್ಯಾಲಿಗೆ ಎಂ ಐ ಟಿ ನಿರ್ದೇಶಕ ಡಾ.ಅನಿಲ್ ರಾಣ ದಂಪತಿ ಚಾಲನೆ ನೀಡಿದರು. ಜಿಪಂ ಸಿಇಓ ಪ್ರತಿಕ್ ಬಾಯಲ್, ಪವರ್ ಸಂಸ್ಥೆಯ ಅಧ್ಯಕ್ಷೆ ತನುಜಾ ಮಾಬೆನ್, ಪರ್ಬ ಸಂಯೋಜಕಿ ಸುಗುಣ ಸುವರ್ಣ, ಕಾರ್ಯದರ್ಶಿ ಪ್ರಿಯಾ ಕಾಮತ್, ಪ್ರಿಯಾ ಕಾಮತ್, ಕೋಶಾಧಿಕಾರಿ ಪುಷ್ಪಾ ರಾವ್, ಸಂಸ್ಥೆಯ ಸದಸ್ಯೆಯರು ಉಪಸ್ಥಿತರಿದ್ದರು.

ಕಾರು ಮತ್ತು ಬೈಕ್ ಗಳ ರ್ಯಾಲಿಯು ಜಿಲ್ಲಾಧಿಕಾರಿ ಕಚೇರಿ ಎದುರಿನಿಂದ ಸಿಂಡಿಕೇಟ್ ವ್ಯತ್ತವಾಗಿ ರಾ.ಹೆ. 169ಎ ಮೂಲಕ ಮಿಷನ್ ಕಂಪೌಂಡ್ ಬಳಿಯ ಕ್ರಿಶ್ಚಿಯನ್ ಹೈಸ್ಕೂಲ್ ಮೈದಾನದ ವರೆಗೆ ಸಾಗಿ ಬಂತು. “ರ್ಯಾಲಿಯಲ್ಲಿ ನಾಸಿಕ್ ಬ್ಯಾಂಡ್‌ನ ಸದ್ದಿನೊಂದಿಗೆ ಸಂಸ್ಥೆಯ ಸದಸ್ಯೆಯರು ಬಿಳಿ ಚೂಡಿದಾರ ಧರಿಸಿ ಹಳದಿ ಪೇಟ ತೊಟ್ಟು ಭಾಗಮಸಿದ್ದರು.

ಸಾಂಸ್ಕೃತಿಕ ವೈಭವ-ವಿವಿಧ ಸ್ಪರ್ಧೆ:
ಪವರ್ ಪರ್ಬದಲ್ಲಿ ಫೆ.7ರಂದು ಇಂದ್ರಾಳಿಯ ಕಲಾಮಯಂ ತಂಡದವರಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ಫೆ. 8ರಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಸೃಷ್ಟಿ ನೃತ್ಯ ಸಂಸ್ಥೆಯ ಮಂಜರಿ ಮತ್ತು ತಂಡದವರಿಂದ ನೃತ್ಯ ಸಿಂಚನ ಹಾಗೂ ಸಂಗೀತ/ಬ್ಯಾಂಡ್ ಸ್ಪರ್ಧೆ, ಬೆಂಕಿ ರಹಿತ ಅಡುಗೆ ತಯಾರಿ ಸ್ಪರ್ಧೆ, ಫೆ. 9ರಂದು ಎಕ್ಸ್‌ಸ್ಟ್ರೀಮ್ ಡ್ಯಾನ್ಸ್ ಅಕಾಡೆಮಿಯ ಮಂಜೀತ್ ಮತ್ತು ತಂಡದವರಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಡ್ರಾಯಿಂಗ್ ಸ್ಪರ್ಧೆ, ಮಾಸ್ಕ್ ಮೇಕಿಂಗ್ ಸ್ಪರ್ಧೆ, ಹಮ್ಮಿಕೊಳ್ಳಲಾಗಿದೆ.