ಉಡುಪಿ ನಗರದ ಹಳೇ ಬಸ್ ನಿಲ್ದಾಣ; ಆವರಣದ ಗೋಡೆ ಕುಸಿದು 3 ದ್ವಿಚಕ್ರ ವಾಹನ ಸಂಪೂರ್ಣ ಜಖಂ.

ಉಡುಪಿ: ನಿನ್ನೆ ರಾತ್ರಿ ಸುರಿದ ಬಾರಿ ಮಳೆಗೆ ಉಡುಪಿ ನಗರದ ಹಳೇ ಬಸ್ ನಿಲ್ದಾಣ ಸಮೀಪದ ಕೃಷ್ಣಾ ಕಾಂಪ್ಲೆಕ್ಸ್ ಶ್ರೀ ನಾಗ ದೇವರ ಸನ್ನಿಧಿಯ ಪಕ್ಕದ 100 ಮೀ ಆವರಣದ ಗೋಡೆ ಕುಸಿದು 3 ದ್ವಿ ಚಕ್ರ ವಾಹನ ಸಂಪೂರ್ಣ ಜಖಂ ಗೊಂಡಿದೆ. ಇದರಿಂದ ಸಾವಿರಾರು ರೂ. ನಷ್ಟವಾಗಿದೆ ಸಮೀಪದ 2 ಅಂಗಡಿಗೆ ಮಳೆಯ ನೀರು ನುಗ್ಗಿ ಸ್ವಲ್ಪ ಪ್ರಮಾಣದ ಹಾನಿಯಾಗಿದೆ. ಇದು ಬೋರ್ಡ್ ಶಾಲೆಯ ಆವರಣದ ಗೋಡೆ ಯಾಗಿದ್ದು, ಈ ಹಿಂದೆಯೂ ಎರಡು ಬಾರಿ ಆವರಣ ಗೋಡೆ ಕುಸಿತು ಗೊಂಡು ಹಾನಿಯಾಗಿದ್ದು ಇದೂವರೆಗೆ ಪರಿಹಾರ ದೊರೆತ್ತಿಲ್ಲ, ಈ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆಕಿಸಿ ಕೊಡುವಂತೆ ಕೃಷ್ಣಾ ಕಾಂಪ್ಲೆಕ್ಸ್ ವರ್ತಕ ಸಂಘ ಆಗ್ರಹಿಸಿದೆ.