ಉಡುಪಿ: ಭಾರತ, ಅಮೆರಿಕಾ, ಕೆನಡಾ, ಆಸ್ಟ್ರೇಲಿಯಾ, ಇಂಗ್ಲೆಂಡ್ ಇತ್ಯಾದಿ ದೇಶಗಳಲ್ಲಿರುವ ಉಡುಪಿ ಪುತ್ತಿಗೆ ಮಠದ ಶಾಖೆಗಳ ವಿಸ್ತೃತ ಸೇವಾ ಪ್ರಕಲ್ಪ ಜಾಗತಿಕ ಹಿಂದೂ ವಿವಾಹ ವೇದಿಕೆ ದಂಪತಿ ಡಾಟ್ ಕಾಮ್‌ಗೆ ಉಚಿತ ನೋಂದಣಿ ಕಚೇರಿಯನ್ನು ಪರ್ಯಾಯ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರ ತೀರ್ಥ ಮತ್ತು ಕಿರಿಯ ಯತಿ ಶ್ರೀಸುಶ್ರೀಂದ್ರತೀರ್ಥ ಸ್ವಾಮೀಜಿ ಫೆ.12ರಂದು ರಾಜಾಂಗಣ ಸಮೀಪ ಉದ್ಘಾಟಿಸಿದರು.
ಸನಾತನ ಹಿಂದೂ ಧರ್ಮದ ಉಳಿವಿಗಾಗಿ ಸಮಾನ ಸಂಸ್ಕೃತಿಯ ವಿವಾಹ ಗಳು ಈ ಕಾಲದ ತುರ್ತು ಅಗತ್ಯವಾಗಿದ್ದು ಇದಕ್ಕಾಗಿಯೇ ದಂಪತಿ ಡಾಟ್ ಕಾಮ್ ಕಾರ್ಯತತ್ಪರವಾಗಿದೆ. ನೂತನ ವಧೂವರರ ಜಾಗತಿಕ ಮೇಳಾ ಮೇಳಿಗಾಗಿ ವಿನೂತನ ತಂತ್ರಜ್ಞಾನೀ ಮಾಧ್ಯಮವನ್ನು ಅಳವಡಿಸಿಕೊಂಡ ಈ ಉಚಿತ ಸೌಲಭ್ಯವನ್ನು ಪಡೆದುಕೊಳ್ಳಬೇಕು ಎಂದು ಸ್ವಾಮೀಜಿ ತಿಳಿಸಿದರು.
ಮಠದ ದಿವಾನ ನಾಗರಾಜ ಆಚಾರ್ಯ, ಅಂತಾರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನ ಆಚಾರ್ಯ, ಆಪ್ತ ಕಾರ್ಯದರ್ಶಿ ರತೀಶ್ ತಂತ್ರಿ, ದಂಪತಿ ಡಾಟ್ ಕಾಮ್‌ನ ಅಖಿಲ ಭಾರತ ಸಂಚಾಲಕ ಕೆ.ವಿ.ರಮಣಾ ಚಾರ್ಯ, ತಾಂತ್ರಿಕ ವಿಭಾಗದ ರಾಮಪ್ರಿಯ, ನಿರ್ವಾಹಕ ಬಳಗದ ವಿಕ್ರಂ ಕುಂಟಾರ್, ರವೀಂದ್ರ, ಪ್ರಮೋದ್, ಶ್ರೀನಿವಾಸ್ ರಾವ್, ಸಾಂಸ್ಕೃತಿಕ ಸಮಿತಿಯ ಪ್ರಮುಖ ರಮೇಶ್ ಭಟ್, ಸುಗುಣಮಾಲಾ ಸಂಪಾದಕ ಮಹಿತೋಷ ಆಚಾರ್ಯ ಉಪಸ್ಥಿತರಿದ್ದರು.












