ಉಡುಪಿ: ಗಾಂಧಿ ಆಸ್ಪತ್ರೆಯಲ್ಲಿ ರಕ್ತದಾನ ಶಿಬಿರ.

ಉಡುಪಿ, ಮೇ 5: ಗಾಂಧಿ ಆಸ್ಪತ್ರೆಯಲ್ಲಿ ಪಂಚಮಿ ಟ್ರಸ್ಟ್, ಪಂಚಲಹರಿ ಫೌಂಡೇಶನ್ ಆಶ್ರಯದಲ್ಲಿ ಜಿಲ್ಲಾಾಸ್ಪತ್ರೆಯ ರಕ್ತನಿಧಿ ವಿಭಾಗದ ಸಹಯೋಗದೊಂದಿಗೆ ರವಿವಾರ ರಕ್ತದಾನ ಶಿಬಿರ ನಡೆಯಿತು.

ಜಿಲ್ಲಾಧಿಕಾರಿ ಡಾ ಕೆ. ವಿದ್ಯಾಾಕುಮಾರಿಯವರು ಉದ್ಘಾಟಿಸಿ, ಪ್ರತಿಯೊಬ್ಬರೂ ರಕ್ತದಾನ ಮಾಡುವಂತೆ ತಿಳಿಸಿದರು.

ಜಿಲ್ಲಾಾ ಸರ್ಜನ್ ಡಾ ಎಚ್. ಅಶೋಕ್, ಜಿಲ್ಲಾಾ ಕ್ಷಯರೋಗ ನಿಯಂತ್ರಣ ಅಧಿಕಾರಿ ಡಾ ಚಿದಾನಂದ ಸಂಜು, ಐಎಂಎ ಉಡುಪಿ-ಕರಾವಳಿ ಶಾಖೆಯ ಅಧ್ಯಕ್ಷೆ ಡಾ ರಾಜಲಕ್ಷ್ಮಿ, ಜಿಲ್ಲಾಸ್ಪತ್ರೆಯ ರಕ್ತನಿಧಿ ವಿಭಾಗದ ವೈದ್ಯಾಾಧಿಕಾರಿ ಡಾ ವೀಣಾ ಕುಮಾರಿ, ಆಸ್ಪತ್ರೆಯ ಎಂಡಿ ಡಾ ಎಂ. ಹರೀಶ್ಚಂದ್ರ, ಲಕ್ಷ್ಮೀ ಹರೀಶ್ಚಂದ್ರ, ಡಾ ವಿದ್ಯಾಾ ತಂತ್ರಿ ಉಪಸ್ಥಿತರಿದ್ದರು.

ಜಿಲ್ಲಾ ಹೋಮ್ ಗಾರ್ಡ್‌ಸ್‌ ಮಾಜಿ ಕಮಾಂಡೆಂಟ್ ಡಾ ಗಣಪತಿ ಭಟ್, ಸಾರ್ವಜನಿಕ ಆರೋಗ್ಯ ಮತ್ತು ಸಂಕ್ರಾಾಮಿಕ ರೋಗಶಾಸ್ತ್ರ ವಿಭಾಗದಲ್ಲಿ ಸಾಧನೆಗೈದ ಡಾ ಎನ್. ರಮೇಶ್ ಹೊಳ್ಳ, ಆಸ್ಪತ್ರೆಯಲ್ಲಿ 14 ವರ್ಷಗಳಿಂದ ವಾರ್ಡ್ ಆಯಾ ಆಗಿ ದುಡಿಯುತ್ತಿರುವ ಶ್ರೀಲತಾ, ಬಾಲ ಪ್ರತಿಭೆಗಳಾದ ಮನ್ಯು ವಿ. ತಂತ್ರಿ, ಮಧ್ವ ವಿ. ತಂತ್ರಿ ಅವರನ್ನು ಸಮ್ಮಾನಿಸಲಾಯಿತು.

ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ ವ್ಯಾಾಸರಾಜ ತಂತ್ರಿ ಪ್ರಸ್ತಾವನೆಗೈದರು. ಡಾ ಪಂಚಮಿ ಹರೀಶ್ಚಂದ್ರ ಸ್ವಾಾಗತಿಸಿ, ಸಿಬಂದಿ ಶ್ವೇತಾ ಕಾಂಚನ್ ವಂದಿಸಿದರು. ಪೂರ್ಣಿಮಾ ಜನಾರ್ದನ್ ಕೊಡವೂರು ನಿರೂಪಿಸಿದರು.