ಉಡುಪಿ: ಕೇಂದ್ರ ಸರಕಾರದ ವತಿಯಿಂದ ಉಡುಪಿ ಜಿಲ್ಲೆಯ ಹಾಲಾಡಿಯ ಬತ್ತಗುಳಿ ಮತ್ತು ಕೆರಾಡಿಯ ಬೆಳ್ಳಾಳ ಮತ್ತು ಚಪ್ಪರಮಕ್ಕಿ ಪ್ರದೇಶಗಳ ಕೊರಗ ಸಮುದಾಯದ ಮೂಲಭೂತ ಸೌಕರ್ಯದ ಅಭಿವೃದ್ಧಿಗೆ 1.20 ಕೋಟಿ ಬಿಡುಗಡೆ ಯಾಗಿದ್ದು, ಸದ್ಯದಲ್ಲೇ ಕಾಮಗಾರಿ ಆರಂಭಿಸಲಾಗುವುದು ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ.
ಪ್ರಧಾನಮಂತ್ರಿ ಆದಿವಾಸಿ ಮಹಾ ಅಭಿಯಾನ ಯೋಜನೆಯಡಿ ಮಂಜೂರಾದ ಈ ಕಾಮಗಾರಿಗಳು ಸದ್ಯದಲ್ಲೇ ಅನುಷ್ಠಾನ ವಾಗಲಿದ್ದು, ಕೇಂದ್ರಕ್ಕೆ ಮತ್ತು ಬುಡಕಟ್ಟು ಜನಾಂಗದ ಪ್ರದೇಶದ ಅಭಿವೃದ್ಧಿಗೆ ಬೇಡಿಕೆ ಸಲ್ಲಿಸಲಾಗಿದೆ ಎಂದು ಸಂಸದ ಕೋಟ ತಿಳಿಸಿದ್ದಾರೆ.