ಉಡುಪಿ: ಕೊಡವೂರು ವಾರ್ಡ್ ಅನ್ನು ಪೂರ್ತಿಯಾಗಿ ಅಭಿವೃದ್ದಿಮಾಡಬೇಕು, ನದಿ ದಂಡೆಗಳಿಗೆ ತಡೆಗೋಡೆ ನಿರ್ಮಿಸಿ ನೀರು ಹೂಗುವ ಚರಂಡಿಗಳ ಅಭಿವೃದ್ದಿ ಮಾಡಬೇಕು ಎನ್ನುವ ಚಿಂತನೆಯಲ್ಲಿ ನಗರಸಭಾ ಸದಸ್ಯರಾದ ಕೆ ವಿಜಯ್ ಕೊಡವೂರು ಇವರು ಉಡುಪಿ ಶಾಸಕರಾದ ಯಶ್ ಪಲ್ ಎ ಸುವರ್ಣ ಇವರನ್ನು ಕೊಡವೂರು ವಾರ್ಡಿಗೆ ಕರೆಸಿ ಕಾನಂಗಿ ಭಜನಾ ಮಂದಿರ ಪರಿಸರ, ಮಾರಿ ಗುಡಿ ಪರಿಸರದಲ್ಲಿ ಇಂದ್ರಾಣಿ ನದಿಗೆ ತಡೆ ಗೋಡೆ ಮತ್ತು ಚರಂಡಿ ನಿರ್ಮಿಸುವಂತೆ ಮನವಿ ಮಾಡಲಾಯಿತು.
ಈ ಸಂದರ್ಬದಲ್ಲಿ ಕಾನಂಗಿ ಭಜನಾ ಮಂದಿರದ ಅಧ್ಯಕ್ಷರು,ಸ್ಥಳೀಯ ಕಾರ್ಯಕರ್ತರು, ಊರಿನ ಹಿರಿಯರು ಹಾಜರಿದ್ದರು.