ಉಡುಪಿ: ಇಬ್ಬರು ಯುವಕರು ಕಾರಿನಲ್ಲಿ ಕುಳಿತು ಬರ್ಗರ್ ತಿಂದು ರಸ್ತೆಗೆ ಕಸ ಎಸೆದು ಹೋದ ಘಟನೆ ಉಡುಪಿ ನಗರದ ಬನ್ನಂಜೆಯಲ್ಲಿ ಇಂದು ಬೆಳಿಗ್ಗೆ ನಡೆದಿದೆ.
ಉಡುಪಿಯ ಬನ್ನಂಜೆ ಬಳಿ ಕಾರು ನಿಲ್ಲಿಸಿ ಯುವಕರು ತಿಂಡಿ ತಿನ್ನುತ್ತಿದ್ದರು. ಆನ್ ಲೈನ್ ನಲ್ಲಿ ಆರ್ಡರ್ ಮಾಡಿದ್ದ ಬರ್ಗರ್ ತಿನ್ನುತ್ತಾ ಕಸವನ್ನು ರಸ್ತೆಗೆ ಎಸೆಯುತ್ತಿದ್ದಾಗ ಬೈಕ್ ಸವಾರರೊಬ್ಬರು ಪ್ರಶ್ನೆ ಮಾಡಿದ್ದಾರೆ. ಬಳಿಕ ಮೊಬೈಲ್ ನಲ್ಲಿ ಚಿತ್ರೀಕರಿಸುತ್ತಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಡಿಯೋ ಚಿತ್ರೀಕರಣ ಮಾಡುತ್ತಿದ್ದಂತೆ ಯುವಕರು ಏಕಾಏಕಿ ಅತೀ ವೇಗದಲ್ಲಿ ಕಾರು ಚಲಾಯಿಸಿ ಎಸ್ಕೆಪ್ ಆಗಿದ್ದಾರೆ.ಇದೀಗ ಯುವಕರ ಈ ಕೃತ್ಯದ ವಿಡಿಯೋ ವೈರಲ್ ಆಗುತ್ತಿದ್ದು ಆಕ್ರೋಶ ವ್ಯಕ್ತವಾಗುತ್ತಿದೆ.