ಉಡುಪಿ: ಕಟ್ಟಡವೊಂದರ ಮೇಲೆ ಸೋಲಾರ್ ಪ್ಯಾನೆಜ್ ಸ್ವಚ್ಛಗೊಳಿಸುವಾಗ ಕಾರ್ಮಿಕರೊಬ್ಬರು ಕೆಳಗೆ ಬಿದ್ದು ಮೃತಪಟ್ಟ ಘಟನೆ ಮಾ.4ರಂದು ಬೆಳಗ್ಗೆ ನಿಟ್ಟೂರು ಎಂಬಲ್ಲಿ ನಡೆದಿದೆ.
ಮೃತರನ್ನು ಬಾಗಲಕೋಟೆ ಮೂಲದ ಹನುಮಂತ ಪುಂಡಲಿಕ ರುಗಿ ಎಂದು ಗುರುತಿಸಲಾಗಿದೆ. ಇವರು ಉಡುಪಿ ಬಾಳಿಗಾ ಫಿಶ್‌ನೆಟ್‌ನ ಪ್ರೊಸೆಸಿಂಗ್ ಯುನಿಟ್‌ನ ಮಾಡಿನ ಮೇಲೆ ಸೋಲಾರ್ ಪ್ಯಾನಲ್ ಸ್ವಚ್ಚಗೊಳಿಸುವಾಗ ಅಕಸ್ಮಿಕವಾಗಿ ಮಾಡಿನ ಮೇಲಿನಿಂದ ಕೆಳಗೆ ಬಿದ್ದರೆನ್ನಲಾಗಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ಅವರು ಉಡುಪಿ ಅಜ್ಜರಕಾಡು ಆಸ್ಪತ್ರೆಗೆ ಕರೆದುಕೊಂಡು ಹೋಗುವ ದಾರಿ ಮಧ್ಯೆ ಮೃತಪಟ್ಟರೆಂದು ತಿಳಿದುಬಂದಿದೆ.
ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












