ಉಡುಪಿ ಎಕ್ಸ್ ಪ್ರೆಸ್ “ಅಮ್ಮ ವಿತ್ ಕಂದಮ್ಮ ಸೀಸನ್-6” ನ ಬಹುಮಾನ ವಿಜೇತ ಅಮ್ಮ-ಮಕ್ಕಳಿವರು

ಉಡುಪಿ: ವಸ್ತುನಿಷ್ಠ ವರದಿಗಾರಿಕೆಗೆ ಹೆಸರುವಾಸಿಯಾದ ನಿಮ್ಮ ಉಡುಪಿ ಎಕ್ಸ್ ಪ್ರೆಸ್ ಪ್ರತಿ ಬಾರಿಯಂತೆಯೆ ಈ ಬಾರಿಯೂ ಮಕ್ಕಳ ದಿನಾಚರಣೆ ಪ್ರಯುಕ್ತ ಮುದ್ದು ಕಂದಮ್ಮಗಳ ಜೊತೆ ತಾಯಂದಿರ ಫೋಟೋ ಸ್ಪರ್ಧೆ “ಅಮ್ಮ ವಿದ್ ಕಂದಮ್ಮ-ಸೀಸನ್ 6” ಅನ್ನು ಏರ್ಪಡಿಸಿದ್ದು, ಸತತ ಆರನೇ ವರ್ಷವೂ ಅಮ್ಮಂದಿರಿಂದ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಈ ಬಾರಿ ವಿಶೇಷವಾಗಿ ಚಿತ್ರನಟಿ ಸ್ವಾತಿ ಶೆಟ್ಟಿ ಹಾಗು ಕನ್ನಡ ಚಿತ್ರ ನಟಿ ಶಾಂತಿ ಗೌಡ ಇವರು ತೀರ್ಪುಗಾರರಾಗಿ ಅತ್ಯುತ್ತಮ ಫೋಟೋಗಳನ್ನು ಆಯ್ಕೆ ಮಾಡಿ ವಿಜೇತರನ್ನು ಘೋಷಿಸಿದ್ದಾರೆ. ಇವರು ವಿವಿಧ ಆಯಾಮಗಳಲ್ಲಿ ಫೋಟೋಗಳ ಪರಾಮರ್ಶೆ ನಡೆಸಿ ನಿಷ್ಪಕ್ಷಪಾತವಾಗಿ ತೀರ್ಪು ನೀಡಿರುತ್ತಾರೆ.

ಉಡುಪಿ ಎಕ್ಸ್ ಪ್ರೆಸ್ ಅಮ್ಮ ವಿತ್ ಕಂದಮ್ಮ ಸೀಸನ್-6 ರ ಬಹುಮಾನ ವಿಜೇತ ಅಮ್ಮ-ಮಕ್ಕಳಿವರು

ಪ್ರಥಮ ಬಹುಮಾನ ವಿಜೇತರು

ಮಗುವಿನ ಹೆಸರು: ಶನ್ಯ ಎಸ್ ಕೋಟ್ಯಾನ್

ತಾಯಿಯ ಹೆಸರು :ಸೋನಿಯಾ ಸೂರಜ್

ಸ್ಥಳ : ಮಂಗಳೂರು

ದ್ವಿತೀಯ ಬಹುಮಾನ ವಿಜೇತರು

ಮಗುವಿನ ಹೆಸರು: ಸಿಯ ಎಸ್ ನಾಯಕ್

ತಾಯಿಯ ಹೆಸರು : ಸುಪ್ರೀತ ಶೆಣೈ

ಸ್ಥಳ : ಮಂಗಳೂರು

ತೃತೀಯ ಬಹುಮಾನ ವಿಜೇತರು

ಮಗುವಿನ ಹೆಸರು: ಪ್ರೆಸ್ಟೀನಾ ಡಿ ಸೋಜಾ

ತಾಯಿಯ ಹೆಸರು: ಪ್ರಿಯಾ ಡಿಸೋಜಾ

ಸ್ಥಳ: ಮಣಿಪಾಲ