ಉಡುಪಿ-ಉಚ್ಚಿಲ ದಸರಾ ಮಹೋತ್ಸವ ಸಂಪನ್ನ.

ಉಚ್ಚಿಲ: ಉಡುಪಿ ಉಚ್ಚಿಲ ದಸರಾ ಮಹೋತ್ಸವದ ವೈಭವದ ಶೋಭಾಯಾತ್ರೆ ಮೆರವಣಿಗೆ ಶನಿವಾರ ‌ರಾತ್ರಿ ಸಂಪನ್ನಗೊಂಡಿತು.ಉಚ್ಚಿಲ ದಸರಾ ಉತ್ಸವ ಪ್ರಯುಕ್ತ ಪ್ರತಿಷ್ಠಾಪಿಸಲಾಗಿದ್ದ ನವದುರ್ಗೆಯರು ಮತ್ತು ಶಾರದಾ ಮಾತೆಯ ವಿಗ್ರಹಗಳ ಜಲಸ್ತಂಭನಾ ಕಾರ್ಯವು ಸಾವಿರಾರು ಜನರ ಸಮ್ಮುಖದಲ್ಲಿ ಕಾಪು ಕಡಲ ತೀರದಲ್ಲಿ ವೈಭವೋಪೇತವಾಗಿ ನೆರೆವೇರಿತು.

Oplus_0

ಸಂಜೆ ನಡೆದ ಶೋಭಾಯಾತ್ರೆಗೆ ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘ ಉಚ್ಚಿಲ ಸಮಿತಿಯ ಗೌರವ ಸಲಹೆಗಾರ ನಾಡೋಜಾ ಡಾ. ಜಿ ಶಂಕರ್, ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಉಡುಪಿ ಶಾಸಕ ಯಶ್ನಾಲ್ ಸುವರ್ಣ, ಅಧ್ಯಕ್ಷ ಜಯ ಸಿ ಕೋಟ್ಯಾನ್, ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ಗಿರಿಧರ ಸುವರ್ಣ, ದಸರಾ ಸಮಿತಿ ಅಧ್ಯಕ್ಷ ವಿನಯ ಕರ್ಕೇರ, ಮಹಾಜನ ಸಂಘದ ಉಪಾಧ್ಯಕ್ಷರಾದ ದಿನೇಶ್ ಎರ್ಮಾಳು, ಮೋಹನ್ ಬೇಂಗ್ರೆ, ಉದ್ಯಮಿ ಆನಂದ ಸಿ ಕುಂದರ್, ಪ್ರಧಾನ ಕಾರ್ಯದರ್ಶಿ ಶರಣ್ ಮಟ್ಟು, ಕೋಶಾಧಿಕಾರಿ ರತ್ನಾಕರ ಸಾಲ್ಯಾನ್ ಸಹಿತ ಗಣ್ಯರು ಶ್ರೀ ಶಾರದಾದೇವಿ ಮತ್ತು ನವದುರ್ಗೆಯರ ವಿಗ್ರಹಗಳಿಗೆ ಪುಷ್ಪಾರ್ಚನೆ ಗೈದರು.

Oplus_0

ಬಳಿಕ ಮಹಾಲಕ್ಷ್ಮಿದೇವಸ್ಥಾನದ ದ್ವಾರದ ಬಳಿಯಿಂದ ಹೋರಾಟ ಶೋಭಾಯಾತ್ರೆ ರಾ.ಹೆ.66ರ ಉಚ್ಚಿಲದಿಂದ ಎರ್ಮಾಳ್-ಉಚ್ಚಿಲ-ಮೂಳೂರು ಕೊಪ್ಪಲಂಗಡಿ ಮಾರ್ಗವಾಗಿ ಕಾಪು ಬೀಚ್ (ದೀಪಸ್ತಂಭದ ಬಳಿ)ನಲ್ಲಿ ಸಮಾಪನಗೊಂಡಿತು.

Oplus_0

ಮೆರವಣಿಗೆಯು ಕಾಪು ಕೊಪ್ಪಲಂಗಡಿ ಬೀಚ್ ತಲುಪಿದ ಬಳಿಕ ಕಾಶಿ ಗಂಗಾರತಿ ಮಾದರಿಯಲ್ಲಿ 10 ಬೃಹತ್ ಆರತಿಗಳೊಂದಿಗೆ ಮಹಾ ಮಂಗಳಾರತಿ ನಡೆಯಿತು. ವಿಗ್ರಹಗಳ ವಿಸರ್ಜನಾ ಪೂರ್ವದಲ್ಲಿ ಹತ್ತು ಸಾವಿರ ಸುಮಂಗಲೆಯರಿಂದ ಸಾಮೂಹಿಕ ಮಹಾ ಮಂಗಳಾರತಿ ನೆರವೇರಿತು. ಬಳಿಕ ಸಮುದ್ರ ಮಧ್ಯೆ ವಿಗ್ರಹಗಳ ಜಲಸ್ತಂಭನ ಕಾರ್ಯ ನಡೆಯಿತು. ಈ ವೇಳೆ ನೂರಾರು ದೋಣಿಗಳಿಂದ ಕೃತಕ ದೀಪ ಸೃಷ್ಟಿಸಿ, ಸುಡುಮದ್ದು ಪ್ರದರ್ಶನವನ್ನು ಕಣ್ತುಂಬಿಕೊಂಡರು. ಈ ಸಂದರ್ಭ ಬೀಚ್‌ನಲ್ಲಿ ಮ್ಯೂಸಿಕಲ್ ನೈಟ್ ಕಾರ್ಯಕ್ರಮ ನಡೆಯಿತು.

Oplus_0

ಎಲ್ಲರ ಆಕರ್ಷಣಾ ಕೇಂದ್ರವಾದ ಅತ್ಯಾಕರ್ಷಕ ಟ್ಯಾಬ್ಲೊ ಶಾರದೆ ಮತ್ತು ನವದುರ್ಗೆಯರ ವಿಗ್ರಹಗಳನ್ನೊಳ ಗೊಂಡ 10 ಟ್ಯಾಬೋಗಳ ಸಹಿತ ಸಾಮಾಜಿಕ ಜಾಗೃತಿ ಸಂದೇಶ ಸಾರುವ ಟ್ಯಾಬ್ಲೊಗಳು, ಭಜನೆ ತಂಡಗಳು, ತೆಯ್ಯಂ ಸಹಿತ ವಿವಿಧ ವೇಷಭೂಷಣಗಳು, ಹುಲಿ ವೇಷ, ಚೆಂಡೆ ಬಳಗ, ನಾಗಸ್ವರ ವಾದ್ಯ ಸಹಿತ ನಾಸಿಕ್ ಬ್ಯಾಂಡ್ ತಂಡಗಳು ಹಾಗೂ 50ಕ್ಕೂ ಅಧಿಕ ಟ್ಯಾಬ್ಲೋ ಒಳಗೊಂಡ ಶೋಭಾಯಾತ್ರೆ ಅದ್ದೂರಿಯಾಗಿ ಸಂಪನ್ನಗೊಂಡಿತು.