ಉಡುಪಿ: ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬರಿಗೆ ಆನ್ಲೈನ್ ಲಿಂಕ್ ಅಪ್ಲಿಕೇಶನ್ ಬಳಸಿ ಹಣ ಕಳೆದುಕೊಂಡು, ಮೋಸ ಹೋದ ಕುರಿತು ಪ್ರಕರಣ ದಾಖಲಾಗಿದೆ.
ಪೂರ್ಣಿಮಾ ಎಂಬವರ ಸಹೋದರನಿಗೆ ವಾಟ್ಸಾಪ್ ಕರೆ ಮಾಡಿದ ಅಪರಿಚಿತ ವ್ಯಕ್ತಿಯೊಬ್ಬ ಆನ್ಲೈನ್ ಟ್ರೇಡಿಂಗ್ನಲ್ಲಿ ಹಣ ಹೂಡಿಕೆ ಮಾಡಿದಲ್ಲಿ ಲಾಭಾಂಶ ಪಡೆಯಬಹುದೆಂದು ತಿಳಿಸಿ ಆಸೆ ಹುಟ್ಟಿಸಿದ್ದ. ಆತ ಗ್ಲೋಬಲ್ ಟ್ರೇಡ್ ಆ್ಯಪ್ ಇಂಡಿಯನ್ ಅಪ್ಲಿಕೇಶನ್ ಲಿಂಕ್ ಒಂದನ್ನು ಕಳಿಸಿದ್ದು ಅದರಲ್ಲಿ ತಿಳಿಸಿದಂತೆ ಅದನ್ನು ದೂರುದಾರರ ಸಹೋದರ ಬಳಸಿ ಹಂತ ಹಂತವಾಗಿ 27,19,565 ರೂ. ಡೆಪಾಸಿಟ್ ಮಾಡಿದ್ದರು. ಹೂಡಿಕೆ ಮಾಡಿದ ಹಣ ಅಥವಾ ಲಾಭಾಂಶ ವಾಪಸ್ ನೀಡಿದೆ ನಂಬಿಸಿ, ಮೋಸ ಮಾಡಿದ್ದಾಗಿ ದೂರಿನಲ್ಲಿ ತಿಳಿಸಿದ್ದಾರೆ.