ಉಡುಪಿ:ಸಂಜೀವ ಶೆಟ್ಟಿ ಕುಂಜಾರುಗಿರಿ ನಿಧನ

ಉಡುಪಿ: ಕುಂಜಾರುಗಿರಿ ಅಂಚೆ ಕಚೇರಿಯ ನಿವೃತ್ತ ಅಂಚೆಪಾಲಕ ಸಂಜೀವ ಶೆಟ್ಟಿ [68]ಇವರು ತನ್ನ ಸ್ವಗೃಹದಲ್ಲಿ ತಾರೀಕು 18/04/2025 ರಂದು ತನ್ನ ಸ್ವಗೃಹದಲ್ಲಿ ನಿಧನರಾದರು.

ಉಡುಪಿ ಜಿಲ್ಲಾ ಗ್ರಾಮಿಣ ಅಂಚೆ ನೌಕರರ ಸಂಘದ ಜೊತೆ ಕಾರ್ಯದರ್ಶಿ ಹಾಗೂ ಪದಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ಅಂಚೆ ನೌಕರರ ಮುಷ್ಕರದ ಸಮಯದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದರು, ಅಲ್ಲದೇ ಊರಿನ ಸಾಮಾಜಿಕ ಧಾರ್ಮಿಕ ಕಾರ್ಯಕ್ರಮದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದರು.

ಮೃತರು ಪತ್ನಿ ,ಇಬ್ಬರು ಪುತ್ರಿಯರು, ಓರ್ವ ಪುತ್ರನನ್ನು ಅಗಲಿರುತ್ತಾರೆ. ಮೃತರ ನಿಧನಕ್ಕೆ ಮಾಜಿ ಮುಖ್ಯಮಂತ್ರಿ ಸದಾನಂದ ಗೌಡ, ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ, ಕಾಪು ಶಾಸಕ ಸುರೇಶ್ ಶೆಟ್ಟಿ ಗುರ್ಮೆ, ಉಡುಪಿ ವಿಭಾಗದ ರಾಷ್ಟ್ರೀಯ ಗ್ರಾಮೀಣ ಅಂಚೆ ನೌಕರರ ಸಂಘದ ಕಾರ್ಯಾಧ್ಯಕ್ಷ ಕಳತ್ತೂರು ದಿವಾಕರ್ ಬಿ ಶೆಟ್ಟಿ ಮುಂತಾದ ಗಣ್ಯರು ಸಂತಾಪ ಸೂಚಿಸಿದ್ದಾರೆ.