ಶ್ರೀ ಶಕ್ತಿ ಮಹಾಗಣಪತಿ, ಶ್ರೀ ಮಹಾಕಾಳಿ ದೇವಸ್ಥಾನ , ಶ್ರೀ ಮಂತ್ರದೇವತೆ, ಶ್ರೀ ವರ್ತೆಶ್ವರಿ, ಶ್ರೀ ದೇವಿ ಕಲ್ಕುಡ ದೇವಸ್ಥಾನ ಕರ್ಮಾರು ಜಿಡ್ಡು ಕ್ಷೇತ್ರ ಇಲ್ಲಿ ವಾರ್ಷಿಕ ನೇಮೋತ್ಸವ ಹಾಗೂ ಮಹಾಗಣಪತಿ ದೇವರಿಗೆ ತುಲಾಭಾರ ಸೇವೆ, ಅನ್ನಸಂತರ್ಪಣೆ ನಡೆದ ದೈವಗಳ ಬಾಲು ಭಂಡಾರ ಇಳಿದು ನೇಮೋತ್ಸವವು ಕ್ಷೇತ್ರದ ಧರ್ಮದರ್ಶಿ ಭೋಜ ಪಾತ್ರಿ ಕುತ್ಯಾರು ಇವರ ಧಾರ್ಮಿಕ ವಿಧಿ ವಿಧಾನ ಮಾರ್ಗದರ್ಶನದಲ್ಲಿ ಶ್ರೀ ಕ್ಷೇತ್ರದಲ್ಲಿ ಸಂಪನ್ನಗೊಂಡಿತ್ತು.
ಮರುದಿನ ಬೆಳಿಗ್ಗೆ 5.00 ರಿಂದ 8.00 ರ ತನಕ ಜಟ್ಟಿಗ ಗುಳಿಗ ಕೋರಗಜ್ಜನ ನೆಮೋತ್ಸವವು ನಡೆಯಿತು.
ಈ ಧಾರ್ಮಿಕ ಕಾರ್ಯಕ್ರಮಕ್ಕೆ ಕಾಪು ಶಾಸಕ ಸುರೇಶ್ ಶೆಟ್ಟಿ ಗುರ್ಮೆ, ಕುಶಲ ಶೇಖರ್ ಶೆಟ್ಟಿ ಆಡಿಟೋರಿಯಂನ ಆಡಳಿತ ನಿರ್ದೇಶಕ ಶೇಖರ್ ಬಿ. ಶೆಟ್ಟಿ, ಉಡುಪಿ ನ್ಯಾಯವಾದಿ ರೋನಾಲ್ಡ್ ಪ್ರವೀಣ್ ಕುಮಾರ್, ಸುದೇಶ್ ರೈ ಸಿ. ಎ, ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಸದಸ್ಯರಾದ ದಿವಾಕರ ಬಿ. ಶೆಟ್ಟಿ, ಕರಂದಾಡಿ ಜಯರಾಮ್ ಶೆಟ್ಟಿ ಮುಂತಾದ ಗಣ್ಯರು ಆಗಮಿಸಿ ಪ್ರಸಾದ ಸ್ವೀಕರಿಸಿದರು.
ಆಡಳಿತ ಮಂಡಳಿ ಸದಸ್ಯರಾದ ನ್ಯಾಯವಾದಿ ಜಗದೀಶ್ ಮೂಲ್ಯ ಕುತ್ಯಾರು, ಚಂದ್ರಶೇಖರ, ವಾಸುದೇವ ಪಾತ್ರಿ, ಶಿವರಾಜ್ ಪಾತ್ರಿ ಹಾಗೂ ಹೊಸಮನೆ ಕರ್ಮಾರು ಜಿಡ್ಡು ಕಟುಂಬಸ್ಥರು, ಗ್ರಾಮಸ್ಥರು ಉಪಸ್ಥಿತರಿದ್ದರು.












