ಉಡುಪಿ: ಉಡುಪಿ ದೊಡ್ಡಣಗುಡ್ಡೆಯ ಶ್ರೀಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ನವರಾತ್ರಿಯ ಪರ್ವಕಾಲದ ಪ್ರಥಮ ದಿನದಂದು ಕದಿರು ಕಟ್ಟುವಿಕೆಯಿಂದ ನವರಾತ್ರಿ ಮಹೋತ್ಸವ ಶುಭಾರಂಭಗೊಂಡಿತು.
ಪ್ರಾತಃಕಾಲ ಮಂಗಳವಾದ್ಯ ಸಹಿತವಾಗಿ ಕದಿರನ್ನು ಬರಮಾಡಿಕೊಳ್ಳಲಾಯಿತು. ಪೂಜೆ ನೆರವೇರಿಸಿ ಸಾನಿಧ್ಯಕ್ಕೆ ಕದಿರು ಕಟ್ಟಲಾಯಿತು.ನಂತರ ಕ್ಷೇತ್ರದ ವತಿಯಿಂದ ಬಂದ ಭಕ್ತಾದಿಗಳಿಗೆ ಕದಿರನ್ನು ವಿತರಿಸಲಾಯಿತು.

ಧಾರ್ಮಿಕ ಕಾರ್ಯಕ್ರಮವಾಗಿ ಆದ್ಯ ಗಣಪತಿಯಾಗ, ನವಕ ಕಲಶ ಪ್ರಧಾನ ಹೋಮ, ಕಲಶಾಭಿಷೇಕ, ಹಾಗೂ ಚಂಡಿಕಾ ಯಾಗ, ಹಾಗೂ ದುರ್ಗಾ ಹೋಮಗಳು ಸಂಪನ್ನಗೊಂಡವು.ಸುನಿಲ್ ಪುಷ್ಪಾ ದಂಪತಿಗಳಿಂದ ಹಾಗೂ ಗೀತಾ ಮಂದಾರ ಶೆಟ್ಟಿ ದಂಪತಿಗಳಿಂದ ಚಂಡಿಕಾಯಾಗ ಶ್ರೀಮತಿ ಮತ್ತು ಶ್ರೀ ರಾಜೇಂದ್ರ ಪ್ರಸಾದ್ ದಂಪತಿಗಳಿಂದ ದುರ್ಗಾ ಹೋಮ ನೆರವೇರಿತು.

ಯಾಗದ ಅಂಗವಾಗಿ ಬ್ರಾಹ್ಮಣ ಸುವಾಸನೆ ಕನ್ನಿಕರಾದನೆ ಬ್ರಾಹ್ಮಣ ಆರಾಧನೆಗಳು ನೆರವೇರಿತು. ಮಧ್ಯಾಹ್ನ ನೆರವೇರಿದ ಮಹಾ ಅನ್ನಸಂತರ್ಪಣೆಯಲ್ಲಿ ಸಹಸ್ರ ಸಂಖ್ಯೆಗೂ ಮಿಕ್ಕಿದ ಭಕ್ತರುಗಳು ಅನ್ನಪ್ರಸಾದವನ್ನು ಸ್ವೀಕರಿಸಿದರು.

ಶ್ರೀ ದುರ್ಗಾ ಆದಿಶಕ್ತಿ ದೇವಿಗೆ ಅಭಿಮುಖವಾಗಿ ಸೃಷ್ಟಿ ಕಲ ಕುಟೀರದ ಡಾಕ್ಟರ್ ಮಂಜರಿ ಚಂದ್ರ ಪುಷ್ಪರಾಜ್ ಇವರ ಶಿಷ್ಯೆ ಶ್ರೇಯ ಆಚಾರ್ಯ, ಕುಮಾರಿ ಸವಿ ಹಾಗೂ ವಿದ್ವಾನ್ ಬನ್ನಂಜೆ ಶ್ರೀಧರ್ ರಾವ್ ಅವರ ಶಿಷ್ಯಯಾದ ಕುಮಾರಿ ನಿಶ್ಚಿತ ನೃತ್ಯಸೇವೆ ಸಮರ್ಪಿಸಿದರು..
ಕ್ಷೇತ್ರದ ನವ ಶಕ್ತಿ ವೇದಿಕೆಯಲ್ಲಿ ಡಾಕ್ಟರ್ ಶ್ರೀಧರ್ ಬಟ್ ಗುಂಡಿ ಬೈಲ್ ಇವರಿಂದ ಸುಗಮ ಸಂಗೀತ ಕಾರ್ಯಕ್ರಮ ನೆರವೇರಿತು.
ಶ್ರೀಮತಿ ಶಾಂತಾ ಸುರೇಶ್ ದಂಪತಿಗಳಿಂದ ದುರ್ಗಾ ನಮಸ್ಕಾರ ಪೂಜೆ ಹಾಗೂ ರಂಗಪೂಜೆ ನೆರವೇರಿತು. ಪ್ರಜ್ಞ ಆಂಗ್ಲ ಮಾಧ್ಯಮ ಶಾಲೆಯ ಮಕ್ಕಳಿಂದ ವಿವಿಧ ವಿನೋದಾವಳಿಗಳು ನೆರವೇರಿತು.
ಚರಣ್ ನವರಾತ್ರಿಯ ಪ್ರಥಮ ದಿನ ಎಲ್ಲಾ ಕಾರ್ಯಕ್ರಮಗಳು ಯಶಸ್ವಿಯಾಗಿ ನೆರವೇರಿತು ಎಂದು ಕ್ಷೇತ್ರ ಉಸ್ತುವಾರಿ ಶ್ರೀಮತಿ ಕುಸುಮ ನಾಗರಾಜ್ ತಿಳಿಸಿರುತ್ತಾರೆ
ಶ್ರೀ ಗುರೂಜಿಯವರಿಂದ ಅನ್ನ ಸಂತರ್ಪಣೆಗೆ ಚಾಲನೆ:
ಕ್ಷೇತ್ರದಲ್ಲಿ ನಿರಂತರವಾಗಿ 10 ದಿನಗಳ ಕಾಲ ನೆರವೇರಲಿರುವ ಮೃಷ್ಟಾನ್ನ ಸಂತರ್ಪಣೆಗೆ ಕ್ಷೇತ್ರದ ಧರ್ಮದರ್ಶಿ ಶ್ರೀಯುತ ಶ್ರೀ ಶ್ರೀ ರಮಾನಂದ ಗುರೂಜಿ ನೆರೆದ ಭಕ್ತರುಗಳಿಗೆ ಅನ್ನ ಸಾರು ಬಡಿಸುವುದರ ಮೂಲಕ ಸಾಂಪ್ರದಾಯಿಕವಾಗಿ ಚಾಲನೆ ನೀಡಿದರು..
ಶಿಸ್ತುಬದ್ಧವಾದ ರುಚಿಕಟ್ಟಾದ ಅನ್ನಪ್ರಸಾದಕ್ಕೆ ಹೆಸರುವಾಸಿಯಾದ ಶ್ರೀ ಕ್ಷೇತ್ರದಲ್ಲಿ ಅನ್ನಪೂರ್ಣೇಯ ಸಾಕ್ಷಾತ್ಕಾರ ವಾಗಲಿ ಎಂದು ನೆರೆದ ಭಕ್ತರುಗಳೆಲ್ಲರೂ ತುಂಬು ಹೃದಯದಿಂದ ಹಾರೈಸಿದರು.












