ಉಡುಪಿ:ಶ್ರೀಚಕ್ರಪೀಠ ಸುರ ಪೂಜಿತೆ ದುರ್ಗಾ ಆದಿಶಕ್ತಿ ಕ್ಷೇತ್ರ ನೂತನ ಗುಡಿಯಲ್ಲಿ ಕಲ್ಕುಡ ಕಲ್ಲುರ್ಟಿ ದೈವಗಳ ಪ್ರತಿಷ್ಠಾಪನೆ

ಉಡುಪಿ: ಉಡುಪಿ ದೊಡ್ಡಣ್ಣ ಗುಡ್ಡೆಯ ಶ್ರೀಚಕ್ರ ಪೀಠ ಸುರಪೂಜಿ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದ ಪರಿವಾರ ದೈವವಾದ ಕಲ್ಕಡ ಕಲ್ಲುಟ್ಟಿ ದೈವಗಳ ಪುನರ್ ಪ್ರತಿಷ್ಠಾಪನೆಯೂ ಕ್ಷೇತ್ರದ ನೂತನ ಗುಡಿಯಲ್ಲಿ ಕ್ಷೇತ್ರದ ಧರ್ಮದರ್ಶಿ, ಶ್ರೀಯುತ ಶ್ರೀ ಶ್ರೀ ರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ ವೇದಮೂರ್ತಿ ಬಿ ಗಣೇಶ್ ಭಟ್ ಅವರ ನೇತೃತ್ವದಲ್ಲಿ ಸಂಪನ್ನಗೊಂಡಿತು.

ಆ ಪ್ರಯುಕ್ತ ಕ್ಷೇತ್ರದಲ್ಲಿ ಬೆಳಿಗ್ಗೆ ಆದ್ಯ ಗಣಪತಿಯಾಗ, ಪ್ರತಿಷ್ಠ ಪ್ರಧಾನ ಹೋಮ ನವಕ ಕಲಶ ಪ್ರಧಾನ ಹೋಮ ಕಲಶಾಭಿಷೇಕ, ಕಲಾಭಿವೃದ್ದಿ ಹೋಮ ಶಿಖರ ಪ್ರತಿಷ್ಠೆ, ದೈವ ಪ್ರತಿಷ್ಠೆಗಳು ನೆರವೇರಿದವು.. ಪ್ರತಿಷ್ಠೆಯ ಪ್ರಯುಕ್ತ ಬ್ರಾಹ್ಮಣರಾಧನೆ ಸುಹಾಸಿನಿ ಆರಾಧನೆ ದೈವ ದರ್ಶನ ಹಾಗೂ ಅನ್ನ ಸಂತರ್ಪಣೆಗಳು ಜರುಗಿದವು.

ಗತಕಾಲದ ಕ್ಷೇತ್ರ ಚರಿತ್ರೆ ಅರುಹಿದ ದೈವ:

ಪುನರ್ ಪ್ರತಿಷ್ಠೆಯ ಪರ್ವಕಾಲದ ಸಂದರ್ಭ ದೈವ ದರ್ಶನ ಆಯೋಜಿಸಲಾಗಿದ್ದು ಗತಕಾಲದ ಕ್ಷೇತ್ರ ಚರಿತ್ರೆಯನ್ನು ದೈವ ತನ್ನ ನುಡಿಯಲ್ಲಿ ಎಳೆ ಎಳೆಯಾಗಿ ತಿಳಿಸಿ ಋಷಿಮುನಿಗಳು ತಪಗೈದು ತಪಶಕ್ತಿಯಿಂದ ಪ್ರತಿಷ್ಠಾಪಿಸಿದ ದೇವಿ ಸನ್ನಿಧಾನ ಹಾಗೂ ಜ್ಞಾನಿಗಳು ಓಡಾಡಿದ ತಪೋ ಭೂಮಿ ಮತ್ತೆ ಚೈತನ್ಯ ಶಕ್ತಿ ಪಡೆದುಕೊಂಡು ಕ್ಷೇತ್ರ ನಿರ್ಮಾತೃ ಶ್ರೀ ರಮಾನಂದ ಗುರೂಜಿಯವರನ್ನು ಪರಿಪೂರ್ಣವಾಗಿ ಅನುಗ್ರಹಿಸಿ ಯಜ್ಞ ಯಾಗಾದಿಗಳು ದಾನ ಧರ್ಮದಿಗಳನ್ನು ಸಂಪನ್ನಗೊಳಿಸಿ ಪ್ರಪಂಚದಲ್ಲೆಡೆ ಕ್ಷೇತ್ರಕಾರಣಿಕ ಪಸರಿಸುವಂತೆ ಅನುಗ್ರಹಿಸಿದ್ದೇನೆ.ಮುಂದೆಯೂ ಶ್ರೀ ಗುರೂಜಿಯವರಿಂದ ಹಲವಾರು ಪವಾಡಗಳು ನಡೆದು ಕ್ಷೇತ್ರ ಖ್ಯಾತಿಯ ಉತ್ತುಂಗಕ್ಕೇರಲಿದೆ. ಬೇಡಿ ಬರುವ ಭಕ್ತಾದಿಗಳಿಗೆ, ನಂಬಿ ಬಂದ ಭಕ್ತರಿಗೆ ಇಂಬನ್ನು ನೀಡಿ ಕಾರಣಿಕ ಮೆರವ ಧೈವವಾಗಿ ನಾನು ಕ್ಷೇತ್ರ ರಕ್ಷಣೆ ಮಾಡುತ್ತೇನೆ ಎಂಬ ಅಭಯ ವಾಕ್ಯ ನೀಡಿತು.. ಈ ಅಭಯವಾಕ್ಯದಿಂದ ನೆರೆದ ಭಕ್ತ ಸಮೂಹ ಸಂತೃಪ್ತ ಭಾವ ಹೊಂದಿತು ಎಂದು ಕ್ಷೇತ್ರ ಉಸ್ತುವಾರಿ ಶ್ರೀಮತಿ ಕುಸುಮ ನಾಗರಾಜ್ ತಿಳಿಸಿರುತ್ತಾರೆ..