ಉಡುಪಿ:ವಸುಧೈವ ಕುಟುಂಬಕಂ ಚಾರಿಟೇಬಲ್ ಟ್ರಸ್ಟ್ (ರಿ) ಉಡುಪಿ ಇದರ ಉದ್ಘಾಟನೆ ಹಾಗೂ ಸೇವಾ ಸಮ್ಮಿಲನ ಕಾರ್ಯಕ್ರಮ

ಉಡುಪಿ:ವಸುಧೈವ ಕುಟುಂಬಕಂ ಚಾರಿಟೆಬಲ್ ಟ್ರಸ್ಟ್ (ರಿ) ಉಡುಪಿ ಇದರ ಉದ್ಘಾಟನೆ ಹಾಗೂ ಸೇವಾ ಸಮ್ಮಿಲನ ಕಾರ್ಯಕ್ರಮ 29/12/2024 ಭಾನುವಾರದಂದು ಸ್ಪಂದನ ಆಶ್ರಮದ ವಿಶೇಷ ಮಕ್ಕಳೊಂದಿಗೆ ಹಾಗೂ ವಿವಿಧ ಕ್ಷೇತ್ರದ ಸಮಾಜ ಸೇವಕರೊಂದಿಗೆ ಸೀ ಬರ್ಡ್ ರೆಸಾರ್ಟ್‌ ಬೆಳ್ಳಂಪಳ್ಳಿ ಅತ್ರಾಡಿ ಯಲ್ಲಿ ನಡೆಸಲಾಯಿತು.

ಸ್ಪಂದನದ ಮಕ್ಕಳಿಗೆ ಅಗತ್ಯ ವಿರುವ ಬಟ್ಟೆ ಪರಿಕರ ನೀಡಲಾಯಿತು.

ಸಮಾಜ ಸೇವಕರಾದ ತನುಲಾ ಹೊಸಬೆಳಕು ಆಶ್ರಮ, ವಿಷು ಶೆಟ್ಟಿ ಅಂಬಲ್ಪಾಡಿ, ಜನಾರ್ಧನ್ ಸ್ಪಂದನ ಆಶ್ರಮ,ನಿತ್ಯಾನಂದ ಒಳ ಕಾಡು, ವಿನಯ ಚಂದ್ರ ಭಾಗವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಪ್ರಸಾದ್ ಕಾಂಚನ್, ದಿವಾಕರ ಶೆಟ್ಟಿ ಕೊಡವೂರು ಇವರು ಉಪಸ್ಥಿತರಿದ್ದರು.

Oplus_131072

ಉಡುಪಿ ಸುತ್ತಮುತ್ತ ತುಂಬಾ ಬಡತನದಲ್ಲಿ ಇರುವ ಕುಟುಂಬವನ್ನು ವಸುಧೈವ ಕುಟುಂಬ ಎಂದು ಗುರುತಿಸಿ ಪ್ರತಿ ತಿಂಗಳು ದವಸ ಧಾನ್ಯ ಹಾಗೂ ಇತರ ಅಗತ್ಯ ವಸ್ತುಗಳನ್ನು ನೀಡುತ್ತಿರುವ ವಸುಧೈವ ಕುಟುಂಬದ ಮುಖ್ಯ ಸದಸ್ಯರಾಗಿರುವ ನಿರ್ಮಲಾ ನಾಯಕ್, ತಾರಾ ಸತೀಶ್, ವತ್ಸಲಾ ಸುಧಾಕರ್, , ರಾಮಪ್ಪ, ಪ್ರಸನ್ನ ಕುಮಾರ್, ಡಾ. ಮಹೇಶ್ ಪೈ, ಉದಯ ಕುಮಾರ್,ಸಂಧ್ಯಾ ಕಾಮತ್, ಗುರುಪ್ರಸಾದ್ ಶೆಟ್ಟಿ, ಮಮತಾ,ಗಣೇಶ್ ಬಾರ್ಕೂರ್, ಮಾಲವಿಕ ಉಪಸ್ಥಿತರಿದ್ದರು.

ಮುಖ್ಯ ಸದಸ್ಯರಾದ ರಮೇಶ್ ತಿಂಗಳಾಯ ಕಾರ್ಯಕ್ರಮವನ್ನ ನಿರೂಪಿಸಿದರು.ಟ್ರಸ್ಟ್ ನ ಪ್ರವರ್ತಕಿ ಪೂರ್ಣಿಮಾ ಶೆಟ್ಟಿ ಉಡುಪಿ ಇವರು ಸ್ವಾಗತಿಸಿದರು.