ಉಡುಪಿಯ ಸಂತೆಕಟ್ಟೆ ಅಂಡರ್ ಪಾಸ್ ಕಾಮಗಾರಿ ವೀಕ್ಷಿಸಿದ ಸಂಸದ ಕೋಟ

ಉಡುಪಿ: ಉಡುಪಿಯ ಸಂತೆಕಟ್ಟೆ ಅಂಡರ್ ಪಾಸ್ ಕಾಮಗಾರಿಯನ್ನು ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಇಂದು ವೀಕ್ಷಣೆ ಮಾಡಿದರು.

ಸಂತೆಕಟ್ಟೆ ಕಾಮಗಾರಿ ಆಮಗತಿಯಲ್ಲಿ ನಡೆಯುತ್ತಿದೆ ಎಂಬ ಸ್ಥಳೀಯರ ಆಕ್ರೋಶದ ಹಿನ್ನೆಲೆಯಲ್ಲಿ ಇಂದು ರಾಷ್ಟ್ರೀಯ ಹೆದ್ದಾರಿಯ ರೀಜನಲ್ ಆಫೀಸರ್ ನ್ನು ಸ್ಥಳಕ್ಕೆ ಕರೆಸಿಕೊಂಡ ಕೋಟ, ಶೀಘ್ರ ಕಾಮಗಾರಿಗೆ ವೇಗ ನೀಡುವಂತೆ ಸೂಚನೆ ನೀಡಿದರು.

ಸಂತೆಕಟ್ಟೆಯ ಡಾಂಬರೀಕರಣ ಕಾಮಗಾರಿ ಇನ್ನು ಮೂರು ದಿನಗಳ ಒಳಗೆ ಪ್ರಾರಂಭಗೊಳ್ಳಲಿದೆ. ನಂತರ ಒಂದು ವಾರದ ಒಳಗೆ ಡಾಂಬರೀಕರಣ ಕಾರ್ಯ ಪೂರ್ಣಗೊಳಿಸಲಾಗುತ್ತದೆ. ಬೆಂಗಳೂರಿನಿಂದ ರೀಜನಲ್ ಆಫೀಸರ್ ಇವತ್ತು ಸ್ಥಳಕ್ಕೆ ಆಗಮಿಸಿದ್ದಾರೆ. ಅನಗತ್ಯ ವಿಳಂಬ ಮಾಡಿದಂತೆ ಎಚ್ಚರಿಕೆ ನೀಡಿದ್ದೇವೆ. ಡಾಂಬರೀಕರಣದ ನಂತರ ಫ್ಲೈ ಓವರ್ ಕಾಮಗಾರಿ ಬಗ್ಗೆ ಯೋಜನೆ ರೂಪಿಸಲಾಗುತ್ತದೆ ಎಂದು ಕೋಟ ಶ್ರೀನಿವಾಸ್ ಪೂಜಾರಿ ಮಾಹಿತಿ ನೀಡಿದರು.