ಉಡುಪಿ:ಬಿಸಿಎ:ತಂತ್ರಜ್ಞಾನ ಕ್ಷೇತ್ರದಲ್ಲಿ ಬಹು ಬೇಡಿಕೆಯ ಕೋರ್ಸ್

ಉಡುಪಿ:ಕಡಿಮೆ ವೆಚ್ಚದಲ್ಲಿ ಕಂಪ್ಯೂಟರ್ ಕ್ಷೇತ್ರದಲ್ಲಿ ಹೆಚ್ಚಿನ ಜ್ಞಾನವನ್ನು ಕಲಿಯಲು ಸಹಕಾರಿಯಾಗುವ ಕೋರ್ಸ್ ಬಿಸಿಎ. ಪ್ರಾಯೋಗಿಕ ಅನುಭವದೊಂದಿಗೆ ಸಂಯೋಜಿಸುವ ಮೂಲಕ ಕಂಪ್ಯೂಟರ್ ಅಪ್ಲಿಕೇಶನ್ಗಳ ಕ್ಷೇತ್ರದಲ್ಲಿ ಪರಿಣಿತರಾಗುವಂತೆ ತ್ರಿಶಾ ಸಂಸ್ಥೆ ಈ ಕೋರ್ಸ್ ಅನ್ನು ವಿನ್ಯಾಸಗೊಳಿಸಿದೆ.

ಆಧುನಿಕ ತಂತ್ರಜ್ಞಾನಗಳಲ್ಲಿ ಪರಿಣತಿ ಹೊಂದಲು ಕಂಪ್ಯೂಟರ್ ಅಪ್ಲಿಕೇಶನ್ಗಳ ಕಲಿಕೆ ಮಹತ್ವಪೂರ್ಣವಾಗಿದೆ. ಇಂದಿನ ಡಿಜಿಟಲ್ ಯುಗದಲ್ಲಿ ವರ್ಡ್ ಪ್ರೊಸೆಸಿಂಗ್, ಡೇಟಾ ವಿಶ್ಲೇಷಣೆ, ಐಎ, ಮತ್ತು ಪ್ರೋಗ್ರಾಮಿಂಗ್ ಸಾಧನಗಳನ್ನು ಬಳಸುವುದು ಶೈಕ್ಷಣಿಕ ಹಾಗೂ ವೃತ್ತಿಪರ ಯಶಸ್ಸಿಗೆ ಸಹಾಯ ಮಾಡುತ್ತದೆ.

ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಜ್ಞಾನ : ಬಿಸಿಎ ಕೋರ್ಸ್ ಕಡಿಮೆ ಖರ್ಚಿನಲ್ಲಿ ತಂತ್ರಜ್ಞಾನ ಕ್ಷೇತ್ರದಲ್ಲಿ ಭವಿಷ್ಯ ನಿರ್ಮಿಸಲು ಉತ್ತಮ ಆಯ್ಕೆ. ಇಂಜಿನಿಯರ್ ಕೋರ್ಸ್ ಗಾಗಿ ವರ್ಷಕ್ಕೆ 2-5 ಲಕ್ಷ ವೆಚ್ಚವಾಗುತ್ತಿದ್ದು, ಬಿಸಿಎ ಕೋರ್ಸ್ 30-50 ಸಾವಿರ ರೂಪಾಯಿಗೆ ಪೂರ್ಣಗೊಳ್ಳುತ್ತದೆ. ಇದರಿಂದ ಕಡಿಮೆ ವೆಚ್ಚದಲ್ಲಿ ಹೆಚ್ಚಿನ ಜ್ಞಾನ ಪಡೆಯಲು ಸಾಧ್ಯವಾಗುತ್ತದೆ.

ತ್ರಿಶಾದಲ್ಲಿ ಬಿಸಿಎ – ನಿಮ್ಮ ತಂತ್ರಜ್ಞಾನ ಭವಿಷ್ಯಕ್ಕೆ ಪರಿಪೂರ್ಣ ಪ್ರಾರಂಭ!

  • ಡೇಟಾ ವಿಶ್ಲೇಷಣೆ(Data analytics), ಐಒಟಿ, ಮತ್ತು ಕೃತಕ ಬುದ್ಧಿಮತ್ತೆ(Artificial Intelligence) ಮತ್ತು ಪ್ರೋಗ್ರಾಮ್ ಗಳಂತಹ ಅನೇಕ ಸರ್ಟಿಫಿಕೇಟ್ ಕೋರ್ಸ್ಗಳು ಲಭ್ಯ .
  • ದ್ವಿತೀಯ ಹಾಗೂ ತೃತೀಯ ವರ್ಷದ ಬಿಸಿಎ ನಲ್ಲಿ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶಗಳು ಕ್ಯಾಂಪಸ್ ನಲ್ಲಿಯೇ ಪಡೆಯುವ ಅವಕಾಶಗಳು.
  • ಪ್ರಾಯೋಗಿಕ ಕಲಿಕೆಯೊಂದಿಗೆ ಬೋಧನಾ ವಿಧಾನ
  • ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ವಸತಿ ಸೌಲಭ್ಯ ತ್ರಿಶಾ ಸಂಸ್ಥೆ : ಜ್ಞಾನದ ಹಸಿವನ್ನು ನೀಗಿಸುವ ಒಂದು ಮಹತ್ವಾಕಾಂಕ್ಷೆಯ ಕನಸಿನಿಂದ “ತ್ರಿಶಾ “ ಎಂಬ ಹೆಸರಿನೊಂದಿಗೆ “ Our mission Quality education ” ಎಂಬ ಸಿದ್ಧಾಂತದೊಂದಿಗೆ 1998 ರಲ್ಲಿ ಸಿಎ ಗೋಪಾಲ ಕೃಷ್ಣ ಭಟ್ ಅವರಿಂದ ಸ್ಥಾಪನೆಗೊಂಡ ತ್ರಿಶಾ ಸಂಸ್ಥೆಯು ಉಡುಪಿ , ಮಂಗಳೂರು ಹಾಗೂ ಬೆಂಗಳೂರಿನಲ್ಲಿ ತಮ್ಮ ಅಂಗ ಸಂಸ್ಥೆಯನ್ನು ಸ್ಥಾಪಿಸಿಕೊಂಡಿದೆ. ಬಿಕಾಂ ಪದವಿಯ ಜೊತೆ ಸಿಎ, ಸಿಎಸ್ ಕೋರ್ಸ್ ನ ತರಬೇತಿಯನ್ನು ನೀಡುತ್ತಿದೆ ಹಾಗೂ ಕಂಪ್ಯೂಟರ್ ಕ್ಷೇತ್ರದಲ್ಲಿ ಅತ್ಯಂತ ಬೇಡಿಕೆಯ ಕೋರ್ಸ್ ಬಿಸಿಎ ಪದವಿಯನ್ನು ನೀಡುತ್ತಿದೆ.

ಪ್ರಸ್ತುತ 2025-26 ನೇ ಶೈಕ್ಷಣಿಕ ಸಾಲಿನ ದಾಖಲಾತಿ ಈಗಾಗಲೇ ಪ್ರಾರಂಭವಾಗಿದ್ದು, ಸೀಮಿತ ಸೀಟುಗಳು ಮಾತ್ರ ಲಭ್ಯವಿದ್ದು ತ್ವರಿತ ದಾಖಲಿಸಿಕೊಂಡು ನಿಮ್ಮ ಭವಿಷ್ಯವನ್ನು ಉಜ್ವಲಗೊಳಿಸಿ, ಹೆಚ್ಚಿನ ಮಾಹಿತಿಗಾಗಿ ಕಟಪಾಡಿಯ ತ್ರಿಶಾ ವಿದ್ಯಾ ಕಾಲೇಜು ಮತ್ತು ಮಂಗಳೂರಿನ ಕೊಟ್ಟಾರದ ವಿದ್ಯಾರ್ಥಿ ಗ್ರಾಮದಲ್ಲಿರುವ ತ್ರಿಶಾ ಕಾಲೇಜಿಗೆ ಸಂಪರ್ಕಿಸಬಹುದು.