ಉಡುಪಿ:ಡಾ.ಯು.ಎಂ ಫಾರೂಕ್ ಚಂದ್ರನಗರ ಇವರಿಗೆ ಪಣಿಯೂರಿನಲ್ಲಿ ಸನ್ಮಾನ

ಉಡುಪಿ:ಬದ್ರಿಯಾ ಜುಮ್ಮಾ ಮಸ್ಜಿದ್ (ರಿ)ಮಜೂರು-ಮಲ್ಲಾರು ಇದರ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಸಮಾಜ ಸೇವಕ ಬಟರ್ ಫ್ಲೈ ಗೆಸ್ಟ್ ಹೌಸ್ ಆಡಳಿತ ನಿರ್ದೇಶಕರಾದ ಡಾ.ಯು.ಎಂ ಫಾರೂಕ್ ಚಂದ್ರನಗರ ಇವರಿಗೆ ಮಲನ್ಗೋಲಿ ಪಣಿಯೂರಿನ ಊರೂಸ್ ಧಾರ್ಮಿಕ ಕಾರ್ಯಕ್ರಮದಲ್ಲಿ ಕಾಜೂರು ಸಯ್ಯಿದ್ ಜಮಲುಲೈಯ್ಲಿ ತಂಗಲ್ ನೇತೃತ್ವದಲ್ಲಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಉಡುಪಿ ಜಿಲ್ಲೆಯ ಉಪ ಖಾಝಿ ಅಬ್ದುಲ್ ರಹಿಮಾನ್ ಮದನಿ ಮೂಳೂರು ,ಬೆಳಪು ಜಾಮಿಯ ಮಸ್ಜಿದ್ ಕತಿಬರಾದ ಅಬ್ದುಲ್ ರಶೀದ್ ಸಖಾಫಿ, ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಶರ್ಫುದ್ದೀನ್ ಶೇಕ್, ಅರಫಾ ಮಸ್ಜಿದ್ ಮಲನ್ಗೋಲಿ ಕತೀಬರಾದ ಅಬ್ದುಲ್ ಮಜೀದ್ ಹನಿಫಿ ಅರಫಾ ಮಸ್ಜಿದ್ ಅಧ್ಯಕ್ಷ ಅಬ್ದುಲ್ ಹಮೀದ್ ಮುಖ್ಯ ಭಾಷಣ ಸಿರಾಜುದ್ದಿನ್ ಸಖಾಫಿ ಕನ್ಯಾನ ಹಾಗೂ ಇನ್ನಿತರರು ಉಪಸ್ಥಿತರಿದ್ದರು.